ನವದೆಹಲಿ: ರಾಷ್ಟ್ರರಾಜಧಾನಿಯ ಕನಿಷ್ಠ 16 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat) ಬಂದಿದೆ. ಶುಕ್ರವಾರ ಮುಂಜಾನೆ ದೆಹಲಿಯ ಕನಿಷ್ಠ 16 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಬೆದರಿಕೆಗಳು ಸುಳ್ಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮತ್ತು ಯಾವುದೇ ಶಾಲೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕಾರ; ಬಾಂಗ್ಲಾದೇಶ ನ್ಯಾಯಾಲಯ ಹೇಳಿದ್ದೇನು? | Bangladesh
ಅಪರಿಚಿತ ಆರೋಪಿಗಳು ದೆಹಲಿ ಪಬ್ಲಿಕ್ ಸ್ಕೂಲ್, ಮಯೂರ್ ವಿಹಾರ್‌ನ ಸಲ್ವಾನ್ ಪಬ್ಲಿಕ್ ಸ್ಕೂಲ್, ಪಶ್ಚಿಮ ವಿಹಾರ್‌ನ ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಶ್ರೀನಿವಾಸ್ ಪುರಿಯ ಕೇಂಬ್ರಿಡ್ಜ್ ಸ್ಕೂಲ್ ಸೇರಿದಂತೆ ಇತರ ಶಾಲೆಗಳಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ 4.30ಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ತಂಡಗಳು ಹಾಗೂ ಶ್ವಾನ ದಳದ ತಂಡಗಳು ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
#WATCH | Delhi | Visuals from outside of Delhi Public School, East of Kailash – one of four schools that received bomb threats, via e-mail, today morning
Bomb detection team, fire officials present at the spot. pic.twitter.com/lhqR7avJqU
— ANI (@ANI) December 13, 2024
ಬೆದರಿಕೆಯ ಇಮೇಲ್ ನಂತರ ಶಾಲಾ ಅಧಿಕಾರಿಗಳು ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳುಹಿಸಬೇಡಿ ಎಂದು ವಿದ್ಯಾರ್ಥಿಗಳ ಪಾಲಕರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಶುಕ್ರವಾರ ಆನ್‌ಲೈನ್ ತರಗತಿಗಳು ನಡೆಯಲಿವೆ ಎಂದು ಹಲವು ಶಾಲೆಗಳು ಘೋಷಿಸಿವೆ.
ಇದು ಒಂದು ವಾರದೊಳಗೆ ನಡೆದ ಎರಡನೇ ಘಟನೆಯಾಗಿದೆ. ಡಿಸೆಂಬರ್ 8 ರಂದು ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಪಶ್ಚಿಮ ವಿಹಾರ್‌ನಲ್ಲಿರುವ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ ಸೇರಿದಂತೆ ದೆಹಲಿಯ 44ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್‌ಗಳ ಮೂಲಕ ಸುಳ್ಳು ಬಾಂಬ್ ಬೆದರಿಕೆಗಳು ಬಂದವು. ದೆಹಲಿ ಪೊಲೀಸರ ಪ್ರಕಾರ ಈ ಮೇಲ್‌ಗಳನ್ನು [email protected] ಐಡಿಯಿಂದ ಕಳುಹಿಸಲಾಗಿದೆ. ಈ ಶಾಲೆಗಳಿಂದ 30 ಸಾವಿರ ಅಮೆರಿಕನ್ ಡಾಲರ್ ಬೇಡಿಕೆ ಇಡಲಾಗಿತ್ತು. ಹಣ ನೀಡದಿದ್ದರೆ ಶಾಲೆಗಳಿಗೆ ಡಿಟೋನೇಟರ್‌ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.(ಏಜೆನ್ಸೀಸ್)
ತನ್ನನ್ನು ಬೆಂಬಲಿಸಿದ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದ; ಸಿಎಂ ಮಮತಾ ಬ್ಯಾನರ್ಜಿ ಹೀಗೆಳಿದ್ದೇಕೆ? | Mamata Banerjee