15ನೇ ಶತಮಾನದ ರಂಗನಾಯಕ

Jaggesh
Published on

ಬೆಂಗಳೂರು: ‘ಕರೊನಾಗೆ ವ್ಯಾಕ್ಸಿನ್ ಕಂಡುಹಿಡಿಯುವವರೆಗೂ ಎಲ್ಲೂ ಹೋಗುವುದಿಲ್ಲ ...’ ಹಾಗಂತ ಜಗ್ಗೇಶ್ ಅವರೇ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಕರೊನಾಗೆ ಔಷಧಿ ಕಂಡುಹಿಡಿಯುವುದು ಯಾವಾಗಲೋ, ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಯಾವಾಗಿನಿಂದಲೋ ಎಂಬ ಪ್ರಶ್ನೆ ಇದ್ದವರಿಗೆ ಉತ್ತರ ಸಿಕ್ಕಿದೆ. ನಿರ್ವಪಕ ವಿಖ್ಯಾತ್ ಹೇಳುವಂತೆ, ಜಗ್ಗೇಶ್ ಅಭಿನಯಿಸಬೇಕಿದ್ದ ‘ರಂಗನಾಯಕ’ ಚಿತ್ರವು ನವೆಂಬರ್​ನಿಂದ ಪ್ರಾರಂಭವಾಗುತ್ತದಂತೆ. ಖುದ್ದು ಜಗ್ಗೇಶ್ ಅವರೇ, ನವೆಂಬರ್ ಹೊತ್ತಿಗೆ ಚಿತ್ರ ಶುರು ಮಾಡಿಕೊಳ್ಳಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅಲ್ಲಿಗೆ ಇನ್ನೆರೆಡು ತಿಂಗಳುಗಳಲ್ಲಿ ಜಗ್ಗೇಶ್ ಮತ್ತೆ ಫೀಲ್ಡ್​ಗೆ ಇಳಿಯಲಿದ್ದಾರೆ. ಇದನ್ನೂ ಓದಿ: ‘ಒಂದಲ್ಲ…8 ಹಾರ್ಡ್​ ಡ್ರೈವ್​ಗಳು…!’; ಇನ್ನೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಸ್ನೇಹಿತ

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ವಿಖ್ಯಾತ್, ‘ರಾಜ್ಯೋತ್ಸವದಿಂದ ಚಿತ್ರ ಶುರು ಮಾಡಬೇಕು ಎಂಬುದು ನಮ್ಮ ಆಸೆ. ಆ ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋ ಮತ್ತು ರಾಮೋಜಿ ಫಿಲಂ ಸಿಟಿಯಲ್ಲಿ ಅಕ್ಟೋಬರ್​ನಿಂದ ಸೆಟ್ ಹಾಕಲಿದ್ದೇವೆ. ಇದು 15ನೇ ಶತಮಾನದ ಕಥೆ ಇರುವ ಚಿತ್ರ. ಇಲ್ಲೂ ಕಾಮಿಡಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಈಗಾಗಲೇ ಗುರುಪ್ರಸಾದ್ ಅವರು ಕಥೆ-ಚಿತ್ರಕಥೆ ಬರೆದು ಮುಗಿಸಿರುವುದಾಗಿ’ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net