ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕೆಎಸ್ಆರ್ಪಿ, ಆರ್ಪಿಸಿ ವಿಭಾಗದಲ್ಲಿ ಖಾಲಿ ಇರುವ 1500 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ.
2023-24ನೇ ಸಾಲಿನಲ್ಲಿ ಕೆಎಸ್ಆರ್ಪಿ, ಆರ್ಪಿಸಿ (ಪುರುಷ, ಮಹಿಳೆ) 1500 ಹುದ್ದೆಗಳ ನೇಮ ಕಾತಿ ನಡೆಯುತ್ತಿದೆ. ಇದರಲ್ಲಿ ಕ್ರೀಡಾ ಪಟುಗಳಿಗೆ ಶೇ. 2, ಕಲ್ಯಾಣ ಕರ್ನಾ ಟಕೇತರ ಒಟ್ಟು 30 ಹುದ್ದೆಗಳು, ಸಿಆರ್ಪಿಸಿ ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳು ಕ್ರೀಡಾಪಟುಗಳಿಗೆ ಶೇ.2ರಂತೆ ಮೀಸಲಿರಿಸಲಾಗಿದೆ.
ಇನ್ನುಳಿದ 1470 ಆರ್ಪಿಸಿ ಕಲ್ಯಾಣ ಕರ್ನಾ ಟಕೇತರ ಮತ್ತು ಕಲ್ಯಾಣ ಕರ್ನಾಟಕ 602 ಆರ್ಪಿಸಿ ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣವನ್ನು ಸರ್ಕಾರ ಆದೇಶಿಸಿದೆ.
ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ರೈಲು ಸೇವೆ ಸ್ಥಗಿತ
ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ!