15 ವಿದ್ಯಾರ್ಥಿಗಳಿಗೆ ಕರೊನಾ; ನರ್ಸಿಂಗ್​​ ಕಾಲೇಜು ಸೀಲ್​ಡೌನ್​

kolar
Published on

ಕೋಲಾರ: ಕೋಲಾರ ಜಿಲ್ಲೆಯ ನರ್ಸಿಂಗ್ ಕಾಲೇಜೊಂದರಲ್ಲಿ 15 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಕರೊನಾ ಕೇರ್​ ಸೆಂಟರ್​ಗೆ ಸೇರಿಸಿದ್ದು, ಕಾಲೇಜಿನ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ.

ಕೋಲಾರ ಜಿಲ್ಲೆಯ ಕೆಜಿಎಫ್​ನ ನೂರುನ್ನೀಸ್ಸಾ ನರ್ಸಿಂಗ್ ಕಾಲೇಜಿಗೆ ಎರಡು ದಿನಗಳ ಹಿಂದೆ‌ ಕೇರಳದಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ನಿನ್ನೆ ಆರೋಗ್ಯಾಧಿಕಾರಿಗಳು ಆರ್​​ಟಿಪಿಸಿಆರ್ ಪರೀಕ್ಷೆ ಮಾಡಿದಾಗ ಸೋಂಕು‌ ಕಂಡುಬಂದಿದೆ. ಒಟ್ಟು 15 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

ಹೀಗಾಗಿ ಕಾಲೇಜಿನಲ್ಲಿದ್ದ ಸುಮಾರು 200 ವಿದ್ಯಾರ್ಥಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಇನ್ನು ಸೋಂಕಿತ ವಿದ್ಯಾರ್ಥಿಗಳನ್ನು ಕರೊನಾ ಕೇರ್ ಸೆಂಟರ್​​ಗೆ ಶಿಫ್ಟ್‌ ಮಾಡಲಾಗಿದ್ದು, ಕಾಲೇಜನ್ನು ಸೀಲ್ ಮಾಡಿ, ಸ್ಯಾನಿಟೈಸ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net