

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತೀಯ ಗಡಿ ಭದ್ರತಾ (ಬಿಎಸ್ಎಫ್) ಪಡೆಯ 69 ರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹಾಗೇ 29 ಸೈನಿಕರು ಚೇತರಿಸಿಕೊಂಡಿದ್ದಾರೆ.
ಒಟ್ಟು 1,454 ಬಿಎಸ್ಎಫ್ ಯೋಧರಲ್ಲಿ ಕರೊನಾ ಸೋಂಕು ದೃಢಪಟ್ಟಿದದು, 852 ಮಂದಿ ಗುಣಮುಖರಾಗಿದ್ದಾರೆ. 595 ಸಕ್ರಿಯ ಪ್ರಕರಣಗಳಿವೆ ಎಂದು ವರದಿಯಾಗಿದೆ.
ಭಾರತದ ಕರೊನಾ ಪ್ರಕರಣ 7 ಲಕ್ಷದ ಗಡಿ ದಾಟಿದೆ. ಮಂಗಳವಾರ ಒಂದೇ ದಿನ 25,252 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಹಾಗೇ ಇಂದು 467 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 20,160ಕ್ಕೆ ಏರಿದೆ. (ಏಜೆನ್ಸೀಸ್)