More

  ಕಾಸರಕೋಡು ಬಂದರು ಪ್ರದೇಶದ ಸುತ್ತ ನಿಷೇಧಾಜ್ಞೆ ಜಾರಿ

  ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಖಾಸಗಿ ಬಂದರು ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ.
  ಮಾರ್ಚ್ 29 ರಿಂದ ಏಪ್ರಿಲ್ 5 ರವರೆಗೆ ಆ ಪ್ರದೇಶದಲ್ಲಿ ಗರಿಷ್ಠ 5 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಂದೆಡೆ ಧರಣಿ ಹಾಗೂ ಪ್ರತಿಭಟನೆ ಉದ್ದೇಶಕ್ಕೆ ಸೇರುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವAತೆ ಘೋಷಣೆ ಕೂಗುವುದನ್ನು ನಿಷೇಽಸಲಾಗಿದೆ.
  ಯಾವುದೇ ವ್ಯಕ್ತಿಗಳು, ದೊಣ್ಣೆಗಳು, ಕತ್ತಿ, ಆಯುಧ, ಈಟಿಗಳ, ಅಥವಾ ಸ್ಪೋಟಕ ಪದಾರ್ಥಗಳನ್ನು ಬಳಸುವಂತಿಲ್ಲ. ಕಲ್ಲುಗಳನ್ನು ಎಸೆಯುವುದನ್ನು ನಿಷೇಽಸಲಾಗಿದೆ. ಈ ನಿಷೇಧಾಜ್ಞೆಯನ್ನು ಎಸ್‌ಪಿ ಅವರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಡಿಸಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
  ಖಾಸಗಿ ಕಂಪನಿ ಹೊನ್ನಾವರದಲ್ಲಿ ಗುತ್ತಿಗೆ ಪಡೆದು ಬಂದರು ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಆ ಸಂದರ್ಭದಲ್ಲಿ ಸಾರ್ವಜನಿಕರು ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕಾಮಗಾರಿಗೆ ಬಳಸುವ ಯಂತ್ರೋಪಕರಣ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ. ಇದರಿಂದ ಕಾರ್ಮಿಕರು ಭಯಬೀತರಾಗಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಹಾಗಾಗಿ ಸಿಆರ್‌ಪಿಸಿ 1973 ರ ಕಲಂ 144 ರಂತೆ ನಿಷೇಧಾಜ್ಞೆ ಜಾರಿ ಮಾಡುತ್ತಿರುವುದಾಗಿ ಜಿಲ್ಲಾಽಕಾರಿ ಅವರು ತಮ್ಮ ಆದೇಶಕ್ಕೆ ಸ್ಪಷ್ಟನೆ ನೀಡಿದ್ದಾರೆ.
  ಸಭೆ ವಿಫಲ:
  ಹೊನ್ನಾವರ ಪೋರ್ಟ್ ಪ್ರೆÊವೇಟ್ ಲಿಮಿಟೆಡ್ ಎಂಬ ಕಂಪನಿ ಖಾಸಗಿ ಬಂದರು ನಿರ್ಮಾಣ ಮಾಡುತ್ತಿದೆ. ಅದಕ್ಕೆ ಸ್ಥಳೀಯರು ತೀವ್ರ ವಿರೋದ ವ್ಯಕ್ತಪಡಿಸುತ್ತಿದ್ದಾರೆ. ಬಂದರು ಕಾಮಗಾರಿ ಸ್ಥಗಿತ ಮಾಡದಿದ್ದರೆ ಮತದಾರ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಅವರು ಮಂಗಳವಾರ ಜಿಲ್ಲಾಽಕಾರಿ ಕಚೇರಿಯಲ್ಲಿ ಗ್ರಾಮಸ್ಥರ ಸಭೆ ಕರೆದಿದ್ದರು. ಸಭೆಯಲ್ಲೂ ಗ್ರಾಮಸ್ಥರು ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಸರ್ಕಾರದಿಂದ ಸೂಚನೆ ಇದೆ. ಖಾಸಗಿ ಬಂದರು ನಿರ್ಮಾಣಕ್ಕೆ ನಾವು ಸಹಕಾರ ನೀಡುತ್ತೇವೆ. ಬಂದರು ನಿರ್ಮಾಣಕ್ಕೆ ಜನರೂ ಸಹಕಾರ ನೀಡಿ. ಮನೆಗಳಿಗೆ ಬೇಕಾದ ಪರಿಹಾರ ಕೊಡಿಸಲಿದ್ದೇವೆ ಎಂದು ಕೋರಿದ್ದರು. ಆದರೆ, ಅದಕ್ಕೆ ಒಪ್ಪದ ಗ್ರಾಮಸ್ಥರು ಗ್ರಾಮಸ್ಥರು ಸಭೆಯಿಂದ ಹೊರ ನಡೆದಿದ್ದರು. ಅದಾಗಿ ಮೂರೆ ದಿನಕ್ಕೆ ಡಿಸಿ 144 ಜಾರಿ ಮಾಡಿದ್ದು, ಪೊಲೀಸ್ ಭದ್ರತೆಯಲ್ಲಿ ಬಂದರು ಕಾಮಗಾರಿ ಪ್ರಾರಂಭಿಸುವ ಮುನ್ಸೂಚನೆ ನೀಡಿದ್ದಾರೆ.

  See also  ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ನಕಲಿ ಲೋಕಾ ಡಿವೈಎಸ್‌ಪಿ ಸೆರೆ

  ಇದನ್ನೂ ಓದಿ: 14 ದಿನದಲ್ಲಿ 16 ಲಕ್ಷ ವಶ


  ಕಾಸರಕೋಡ ಟೊಂಕಾ ಭಾಗ ಮೀನುಗಾರಿಕೆ ಪ್ರದೇಶ. ಒಂದು ದೋಣಿಯ ಮೇಲೆ ಕನಿಷ್ಠ 25 ಜನ ಪ್ರಯಾಣ ಮಾಡಬೇಕು. ಮೀನುಗಾರಿಕೆಗೆ ಜನ ಸೇರುವುದು ಅನಿವಾರ್ಯ. ಆದರೆ, ಜಿಲ್ಲಾಧಿಕಾರಿ ಅವರು 144 ಜಾರಿ ಮಾಡಿ, 5 ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಸಿದ್ದಾರೆ. ನಮ್ಮ ಜೀವನೋಪಾಯಕ್ಕೂ ಇದರಿಂದ ತೊಂದರೆ ಉಂಟಾಗಿದೆ. ಬಂದರು ನಿರ್ಮಾಣ ವಿಚಾರವಾಗಿ ನಾವು ಮೊನ್ನೆ ನಡೆದ ಸಭೆಯಲ್ಲಿ ನಮ್ಮ ಅನುಮಾನಗಳನ್ನು ಕೇಳಿದ್ದೇವೆ. ಬಂದರು ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಮೀನುಗಾರಿಕೆ ಸಚಿವರ ಭೇಟಿಗೆ ಕಾಲಾವಕಾಶ ಕೋರಿದ್ದೇವೆ. ಎಲ್ಲರೊಟ್ಟಿಗೆ ಚರ್ಚಿಸಿ ನಮ್ಮ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ.
  ರಾಜು ತಾಂಡೇಲ, ಟೊಂಕ
  ಮೀನುಗಾರರ ಮುಖಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts