More

    14 ದಿನದಲ್ಲಿ 16 ಲಕ್ಷ ವಶ

    ಯಲ್ಲಾಪುರ: ದಾಖಲೆ ಇಲ್ಲದ 1.20 ಲಕ್ಷ ರೂ.ಗಳನ್ನು ತಾಲೂಕಿನ ಕಿರವತ್ತಿ ತನಿಖಾ ಠಾಣೆಯಲ್ಲಿ ಗುರುವಾರ ವಶಕ್ಕೆ ಪಡೆಯಲಾಗಿದೆ.
    ಪುಣೆಯಿಂದ ಉಡುಪಿಗೆ ಹೊರಟಿದ್ದ ವಿಶ್ವನಾಥ ಲೋಕಯ್ಯ ಶೆಟ್ಟಿ ಅವರ ಕಾರಿನಲ್ಲಿ ನಗದು ದೊರಕಿದೆ. ಹಣವನ್ನು ಮುಟ್ಟುಗೋಲು ಹಾಕಿಕೊಂಡು ಯಲ್ಲಾಪುರ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಎಆರ್‌ಒ ಅಜ್ಜಪ್ಪ ಸೊಗಲದ ತಿಳಿಸಿದ್ದಾರೆ.

    ಖಾನಾಪುರದಲ್ಲಿ:

    ಗೋವಾದಿಂದ ಬೆಳಗಾವಿಗೆ ಸಾಗಿಸುತ್ತಿದ್ದ ದಾಖಲೆ ಇಲ್ಲದ 7.98 ಲಕ್ಷ ರೂ. ನಗದನ್ನು ಖಾನಾಪುರ ಕುಣಕುಂಬಿ ಚೆಕ್ ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ.
    ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಈ ಚೆಕ್ ಪೋಸ್ಟ್ ಸೇರಿದೆ. ಬೆಳಗಾವಿಯ ಬಸವರಾಜ ರೆಡ್ಡಿ ಅವರು ಬೆಳಗ್ಗೆ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಎಸ್‌ಎಸ್‌ಟಿ ತಂಡದ ತಪಾಸಣೆಯ ವೇಳೆ ಹಣ ಪತ್ತೆಯಾಗಿದೆ.

    ಮಾರ್ಚ್‌ 16 ರಂದು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಿದೆ. ಜಿಲ್ಲೆಯಲ್ಲಿ 25 ಚೆಕ್‌ ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ವಾಹನಗಳಲ್ಲಿ, ಬಸ್‌ಗಳ ಮೇಲೆ ಸಾಗಿಸುತ್ತಿದ್ದ ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆಯಲಾಗುತ್ತಿದೆ.

    ಈ ಹಣವನ್ನು ಖಜಾನೆಯಲ್ಲಿ ಇಟ್ಟು, ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡಲಾಗುತ್ತದೆ. ದಾಖಲೆ ಒದಗಿಸದೇ ಇದ್ದಲ್ಲಿ ಹಣವನ್ನು ಜಪ್ತು ಮಾಡಿ, ಸಾಗಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts