More

    ಅತ್ಯಾಚಾರ ಯತ್ನದಲ್ಲಿ ವಿಫಲನಾದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಬೆಂಕಿ ಹಚ್ಚಿ ಕೊಲೆಗೈದ

    ಬಿಲಾಸ್ಪುರ: ಛತ್ತೀಸಗಢದ ಮುಂಗೇಲಿ ಜಿಲ್ಲೆಯಲ್ಲಿ ಲೈಂಗಿಕ ಚಟುವಟಿಕೆಗೆ ವಿರೋಧಿಸಿದ 14 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
    ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜೂನ್ 30 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ‘ಆರೋಪಿ ಬಬ್ಲು ಭಾಸ್ಕರ್ (30) ಎಂಬಾತನನ್ನು ಸೆಕ್ಷನ್ 302 (ಕೊಲೆ), 506 (ಅಪರಾಧ ಬೆದರಿಕೆ), ಭಾರತೀಯ ದಂಡ ಸಂಹಿತೆಯ 354 (ಐಪಿಸಿ) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಬಿಲಾಸ್‌ಪುರ ಶ್ರೇಣಿಯ ಐಜಿಪಿ ದೀಪಾಂಶು ಬಾಬ್ರಾ ತಿಳಿಸಿದ್ದಾರೆ.

    ಇದನ್ನೂ ಓದಿ: ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

    ಬಾಲಕಿಯ ಕುಟುಂಬದೊಂದಿಗೆ ವೈಷಮ್ಯ ಹೊಂದಿದ್ದ ಭಾಸ್ಕರ್ ಆಕೆಯ ಮನೆಗೆ ನುಗ್ಗಿದ. ಆಕೆ ಏಕಾಂಗಿಯಾಗಿರುವಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ. ಅದಕ್ಕೆ ಆಕೆ ವಿರೋಧವ್ಯಕ್ತಪಡಿಸಿದ್ದರಿಂದ ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಮುಗೇಲಿಯ ಪೊಲೀಸ್ ಅಧೀಕ್ಷಕ (ಎಸ್ಪಿ) ಡಿ ಶ್ರವಣ್ ತಿಳಿಸಿದ್ದಾರೆ,
    ಹುಡುಗಿ ಸಹಾಯಕ್ಕಾಗಿ ಕೂಗುತ್ತಾ ಮನೆಯ ಹೊರಗೆ ಓಡಿದಾಗ ನೆರೆಹೊರೆಯವರು ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆ ಬುಧವಾರ ಸಾವನ್ನಪ್ಪಿರುವುದಾಗಿ ಅವರು ತಿಳಿಸಿದ್ದಾರೆ.

    ಪಿಎಸ್‌ಐಗೆ ಗಂಡುಮಗು ಹುಟ್ಟಿದ ಖುಷಿ: ಪೊಲೀಸ್‌ ಠಾಣೆ ಸೀಲ್‌ಡೌನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts