ಪ್ರಯಾಣಿಕರಿದ್ದ ಬೋಟ್​ಗೆ Navy Speedboat ಡಿಕ್ಕಿ; 13 ಮಂದಿ ಸಾವು, ಮುಂದುವರಿದ ಶೋಧ ಕಾರ್ಯ

Boat Collapse
Published on

ಮುಂಬೈ: ಭಾರತೀಯ ನೌಕಾಪಡೆಯ ಸ್ಪೀಟ್​ ಬೋಟ್​ (Navy Speedboat) ಒಂದು ಪ್ರಯಾಣಿಕರಿದ್ದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟಿರುವ ಘಟನೆ ಮುಂಬೈ ಕರಾವಳಿ ಪ್ರದೇಶದಲ್ಲಿ ನಡೆದಿದೆ.

ಅವಘಡದಲ್ಲಿ ನೀರು ಪಾಲಾಗಿದ್ದ 110 ಮಂದಿಯನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಘಟನೆಯಲ್ಲಿ ಮೂವರು ನೌಕಾಪಡೆಯ ಅಧಿಕಾರಿಗಳು, 10 ಮಂದಿ ನಾಗರೀಕರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು, ಇಂಜಿನ್ ಪ್ರಯೋಗಕ್ಕೆ ಒಳಗಾಗಿದ್ದ ನೌಕಾಪಡೆಯ ಸ್ಪೀಡ್ ಬೋಟ್ (Navy Speedboat) ಮುಂಬೈ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಗಳಿಗೆ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ನೀಲ್​ಕಮಲ್​ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. 

ಅವಘಡಕ್ಕೆ ಸಂಬಂಧಿಸಿದಂತೆ 4 ನೌಕಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು, ಒಂದು ಕೋಸ್ಟ್ ಗಾರ್ಡ್ ಬೋಟ್ ಮತ್ತು ಮೂರು ಮೆರೈನ್ ಪೊಲೀಸ್ ಕ್ರಾಫ್ಟ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈವರೆಗೂ 110 ಮಂದಿಯನ್ನು ರಕ್ಷಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net