ಚೈನ್ನೈ: 12 ವರ್ಷಗಳಿಂದೆ ಒಂದು ಸಣ್ಣ ಟಿ.ವಿ ನಿರೂಪಕರಾಗಿ ವೃತ್ತಿ ಜೀವನ ಆರಂಭಿಸಿದ ಕಾಲಿವುಡ್ನ ಹೀರೊ, ಇಂದು ಭಾರತ ಚಲನಚಿತ್ರದ ಸೂಪರ್ಸ್ಟಾರ್ಗಳಾದ ರಜನಿಕಾಂತ್, ಕಮಲ್ ಹಸನ್ ಸಿನಿಮಾಗಳ ಕಲೆಕ್ಷನ್ ಮಾಡುವ ಗಲ್ಲಾಪೆಟ್ಟಿಯನ್ನು ಕೂಡ ಧೂಳ್ ಎಬ್ಬಿಸುವ ಮಟ್ಟಿಗೆ ಈ ಸ್ಟಾರ್ ಬೆಳೆದು ನಿಂತಿದ್ದಾರೆ.
ಹೌದು, ಈ ಕಾಲಿವುಡ್ ನಟ ಬೇರೆ ಯಾರು ಅಲ್ಲ, ಶಿವಕಾರ್ತೆಕೇಯನ್(ShivaKarthikeyan). ರಾಜಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಶಿವಕಾರ್ತೆಕೇಯನ್ ನಟಿಸಿರುವ ಬಹು ನಿರಿಕ್ಷೀತ ಸಿನಿಮಾ ‘ಅಮರಾನ್'(AMARAN) ಚಲಚಿತ್ರವು ದೀಪಾವಳಿ ಹಬ್ಬದ ಅಂಗವಾಗಿ ಇದೇ, ಅ.31 ರಂದು ಬಿಡುಗಡೆಯಾಗಿದ್ದು, ಕೇವಲ ಮೂರು ದಿನಗಳಲ್ಲೇ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದೆ.
ಅಭಿಮಾನಿಗಳು ಮತ್ತು ಚಿತ್ರ ಪ್ರೇಕ್ಷಕರಿಂದ ಬಂದ ಪಾಸಿಟಿವ್ ರೆಸ್ಪಾನ್ಸ್ನಿಂದ ಮೂರು ದಿನಗಳಲ್ಲಿ ಅಮರಾನ್ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಆರ್ಕೆಎಫ್ ಪ್ರೊಡಕ್ಷನ್ ಹೌಸ್ ಅಧಿಕೃತ ಅಪ್ಡೆಟ್ ಪ್ರಕಾರ, ಮೊದಲನೇ ದಿನ ಅಮರಾನ್ ಚಿತ್ರವು ವಿಶ್ವಾದ್ಯಂತ 42.3 ಮೂರು ಕೋಟಿ ಕಲೆಕ್ಷನ್ ಮಾಡಿದೆ.
ಇದು ಅಲ್ಲದೆ, ಹಲವು ಕೇಂದ್ರಗಳ ವದರಿ ಪ್ರಕಾರ ಮೊದಲ ದಿನ ಕಲೆಕ್ಷನ್ಗಿಂತ ಎರಡನೇ ಮತ್ತು ಮೂರನೇ ದಿನ ಕಲೆಕ್ಷನ್ ಮೊದಲ ದಿನಗಿಂದ ದುಪ್ಪಟ್ಟು ಆಗಿದೆ ಎಂದು ಹೇಳಲಾಗಿದೆ. ಇನ್ನು ಈ ಕೇಂದ್ರಗಳ ಪ್ರಕಾರ ತಮಿಳುನಾಡಿನಲ್ಲಿ ಫಸ್ಟ್ ಡೇ ಟಿಕೆಟ್ಗಾಗಿ ನೂಕುನುಗ್ಗಲು ಏರ್ಪಟ್ಟು ಭಾರೀ ಒತ್ತಡ ಎದುರಿಸಬೇಕಾಗಿತ್ತು. ಹೀಗಾಗಿ, ಚಿತ್ರವು ಕಲೆಕ್ಷನ್ ಮೂಲಗಳ ಪ್ರಕಾರ ಕೇವಲ ಮೂರು ದಿನಗಳಲ್ಲಿ ಬರೊಬ್ಬರಿ 100 ಕೋಟಿ ಗಳಿದೆ.
ನಟ ಶಿವ ವೃತ್ತಿ ಜೀವನದ 100 ಕೋಟಿ ಗಳಿದ ಮೂರನೇ ಚಿತ್ರವಾಗಿದೆ. ಈ ಮೂಲಕ ತಮಿಳುನಾಡಿನ 100 ಕೋಟಿ ಗಳಿಸುವ ಬಿಗ್ಲಿಗ್ ಹಂತಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ನಟ ಶಿವಕಾರ್ತೆಕೇಯನ್ ಅವರ ಅಮರಾನ್ ಚಿತ್ರ ಸೇರಿದಂತೆ ಈವರೆಗೆ 5 ಚಿತ್ರಗಳು ಮಾತ್ರ ಮೂರು ದಿನಗಳಲ್ಲಿ 100 ಕೋಟಿ ರೂ.ಗಳು ಗಳಿಕೆ ಮಾಡಿವೆ ಎಂದು ವರದಿಗಳು ಉಲ್ಲೇಖಿಸಿವೆ.
ದಳಪತಿ ವಿಜಯ್, ಸೂಪರ್ಸ್ಟಾರ್ ರಜನಿಕಾಂತ್, ಅಜಿತ್ ಕುಮಾರ್ ಮತ್ತು ಕಮಲ್ ಹಾಸನ್ ಮೂರು ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದ ದಿಗ್ಗಜರ ಸಿನಿಮಾಗಳು. ಈಗ ಈ ಪಟ್ಟಿಯಲ್ಲಿ ಶಿವಕಾರ್ತೆಕೇಯನ್ ಪ್ರವೇಶಿಸಿದ್ದಾರೆ. 2012ರಲ್ಲಿ ಮರೀನಾ ಚಲನಚಿತ್ರಾದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವ, 12 ವರ್ಷಗಳ ಕಠಿಣ ಪರಿಶ್ರಮದಿಂದ ಇಂದು ದಿಗ್ಗಜರ ಗಲ್ಲಾಪೆಟ್ಟಿಗೆಯನ್ನು ಕೂಡ ದೂಳೆಬ್ಬಿಸುವ ಮಟ್ಟಕ್ಕೆ ತಲುಪಿದ್ದಾರೆ ಎಂದರೆ ಅವರು ಬೆಳೆದು ಬಂದಿರುವ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ ಎಂಬುವುದು ಈ ಮೂಲಕ ಗೊತ್ತಾಗುತ್ತೆ(ಏಜೆನೀಸ್).