ಒಂಟಿ ಮನೆಯಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರ ನಡೆಸುತ್ತಿದ್ದ 12 ಜನರ ಬಂಧನ

cropped-Arrested-611631070
Published on

ರಾಮನಗರ: ವಾಮಾಚಾರದ ಮೂಲಕ ಹಣ ಗಳಿಸಲು ಮುಂದಾಗಿದ್ದ 12 ಜನರನ್ನು ರಾಮನಗರ ಜಿಲ್ಲೆಯ ಸಾತನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ‌ ಜತೆ ನಾಲ್ಕು ವರ್ಷದ ಬಾಲಕಿಯೂ ಪತ್ತೆಯಾಗಿದ್ದು, ಇದು ನಿಧಿ ಆಸೆಗೆ ಬಲಿ ಕೊಡುವ ಪ್ರಯತ್ನ ನಡೆಸಿದ್ದರೇ ಎಂಬ ಅನುಮಾನಕ್ಕೆ ಎಡೆಮಾಡಿದೆ.

ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಭೂಹಳ್ಳಿ ಗ್ರಾಮದ ಒಂಟಿ ಮನೆಯಲ್ಲಿ ಹಲವು ಕಿಡಿಗೇಡಿಗಳು, ನಿಧಿ ಆಸೆಗಾಗಿ ಒಂಟಿ ಮನೆಯಲ್ಲಿ ಗುಂಡಿ ತೋಡಿ ಪೂಜೆ ಮಾಡುತ್ತಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸಾತನೂರು ಪೊಲೀಸರು ತಡರಾತ್ರಿ 12 ಗಂಟೆಯಲ್ಲಿ ದಾಳಿ ಕಾರ್ಯಾಚರಣೆ ನಡೆಸಿದರು. ಪ್ರಕರಣದ ಸಂಬಂಧವಾಗಿ ಬೆಂಗಳೂರು, ಮೈಸೂರು, ಹಾವೇರಿ, ಹೆಚ್.ಡಿ.ಕೋಟೆ ಮೂಲದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ‌ ಜತೆ ನಾಲ್ಕು ವರ್ಷದ ಬಾಲಕಿಯೂ ಪತ್ತೆಯಾಗಿದ್ದು, ಮಗು ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಗುವನ್ನು ಬಲಿ ಕೊಡಲು ಕರೆತಂದಿರಬಹುದು ಎಂಬ ಶಂಕೆ ಮೂಡಿಬಂದಿದೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವ ಪೊಲೀಸರು ಹೆಚ್ಚಿನ ತನಿಖೆ‌ ಆರಂಭಿಸಿದ್ದಾರೆ. ಬಾಲಕಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net