More

    24 ಗಂಟೆಗಳಲ್ಲಿ 11,466 ಹೊಸ ಕರೊನಾ ಪ್ರಕರಣಗಳು; ಶೇಕಡ 13.2 ಹೆಚ್ಚಳ

    ನವದೆಹಲಿ: ಮಂಗಳವಾರದಂದು ಭಾರತದಲ್ಲಿ 11,466 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಇದು ಸೋಮವಾರ ವರದಿಯಾದ ನಿತ್ಯಪ್ರಕರಣಗಳಿಗಿಂತ ಶೇಕಡ 13.2 ರಷ್ಟು ಹೆಚ್ಚಾಗಿದೆ. ಜೊತೆಗೆ, ಕಳೆದ 24 ಗಂಟೆಗಳಲ್ಲಿ 460 ಜನರು ಕರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

    ಕಳೆದ 24 ಗಂಟೆಗಳ ಒಟ್ಟು 11,466 ಹೊಸ ಪ್ರಕರಣಗಳಲ್ಲಿ, 6,409 ಪ್ರಕರಣಗಳು ಕೇರಳದಿಂದ ವರದಿಯಾಗಿವೆ. ರಾಜ್ಯದಲ್ಲಿ 47 ಸೋಂಕಿತರು ಮಂಗಳವಾರ ಮೃತಪಟ್ಟಿದ್ದಾರೆ. ಹಾಲಿ ದೇಶದಲ್ಲಿ ಸಕ್ರಿಯವಾಗಿರುವ ಕರೊನಾ ಪ್ರಕರಣಗಳ ಸಂಖ್ಯೆ 1,39,683 ರಷ್ಟಿದ್ದು, ಇದು ಕಳೆದ 264 ದಿನಗಳಲ್ಲಿನ ಅತಿಕಡಿಮೆ ಪ್ರಮಾಣವಾಗಿದೆ.

    ಭಾರತದಲ್ಲಿ ಈವರೆಗೆ 3 ಕೋಟಿ 43 ಲಕ್ಷಕ್ಕೂ ಹೆಚ್ಚು ಕರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, 4 ಲಕ್ಷದ 61 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

    ಟ್ವಿಟರ್​ನಲ್ಲಿ ಮಾತಾಡ್ತೀರಿ, ಇಲ್ಲೂ ಪ್ರತಿಕ್ರಿಯೆ ನೀಡಿ! ಮಹಾ ಸಚಿವ ನವಾಬ್​​ ಮಲಿಕ್​​ರ ಅಫಿಡೆವಿಟ್​ ಕೇಳಿದ ಹೈಕೋರ್ಟ್​

    ಬಸ್​ ಹತ್ತುವಾಗ ಪ್ರಯಾಣಿಕರ ಮೊಬೈಲ್​​ ಎಗರಿಸುತ್ತಿದ್ದ ಖದೀಮರು!

    VIDEO| ಪುನೀತ್​ರನ್ನು ಗಂಗಾವತಿ ಪೊಲೀಸರು ಈಗಲೂ ನೆನಪಿಸಿಕೊಳ್ಳೋದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts