ಮಕ್ಕಳ ಎದುರೇ ಮಹಿಳೆಯನ್ನು ರೇಪ್​​ ಮಾಡಿದ ದುರುಳರು; ಅವಳ್ಯಾಕೆ ಹೋಗಬೇಕಿತ್ತು ಎಂದ ಪೊಲೀಸ್​ ಮುಖ್ಯಸ್ಥ

rape-sexual-abuse
Published on

ಲಾಹೋರ್​: ಮಹಿಳೆಯನ್ನು ಆಕೆಯ ಮಕ್ಕಳ ಎದುರೇ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಒಟ್ಟು 15 ಮಂದಿಯನ್ನು ಬಂಧಿಸಿದ್ದಾಗಿ ಪಾಕ್​ ಪೊಲೀಸರು ತಿಳಿಸಿದ್ದರು.

ಬುಧವಾರ ರಾತ್ರಿ ಈ ಪೂರ್ವ ಲಾಹೋರ್​​ನಲ್ಲಿ ಘಟನೆ ನಡೆದಿತ್ತು. ಈ ಮಹಿಳೆ ಕಾರಿನಲ್ಲಿ ಮಕ್ಕಳೊಂದಿಗೆ ತೆರಳುತ್ತಿದ್ದರು. ಆದರೆ ಹೆದ್ದಾರಿ ಮಧ್ಯ ನಿರ್ಜನ ಪ್ರದೇಶದಲ್ಲಿ ಇಂಧನ ಖಾಲಿ ಆಗಿ, ಚಲಿಸದೆ ನಿಂತ ಸಮಯದಲ್ಲಿ, ಅಲ್ಲಿಗೆ ಶಸ್ತ್ರಾಸ್ತ್ರ ಸಹಿತರಾಗಿ ಬಂದಿದ್ದ ಇಬ್ಬರು ಮಹಿಳೆಯನ್ನು ಅತ್ಯಾಚಾರಗೈದು, ಆಕೆಯ ಬಳಿಯಿದ್ದ ಹಣ, ಒಡವೆಗಳನ್ನೆಲ್ಲ ಕದ್ದಿದ್ದಾಗಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬ್ಯಾಡ್ಮಿಂಟನ್: ಪಿವಿ ಸಿಂಧು, ಶ್ರೀಕಾಂತ್‌ಗೆ ಭಾರತ ತಂಡಗಳ ಸಾರಥ್ಯ

ಶಸ್ತ್ರಾಸ್ತಗಳನ್ನು ಹಿಡಿದು ಬಂದವರನ್ನು ನೋಡಿದ ಮಹಿಳೆ ಕಾರಿನ ಎಲ್ಲ ಬಾಗಿಲುಗಳನ್ನೂ ಲಾಕ್​ ಮಾಡಿದ್ದರು. ಆದರೆ ದರೋಡೆಕೋರರು ಕಾರಿನ ಗಾಜಿನ ಕಿಟಕಿಗಳನ್ನು ಒಡೆದು, ಲಾಕ್ ತೆಗೆದು ಮಹಿಳೆಯನ್ನು ಹೊರಗೆ ಎಳೆದಿದ್ದಾರೆ. ಅದಾಗಲೇ ಭಯಭೀತರಾಗಿದ್ದ ಮಕ್ಕಳ ಎದುರೇ ಅವರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿತ್ತು.

ಈ ಘಟನೆ ಬಗ್ಗೆ ಪಾಕ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಖಂಡನೆ ವ್ಯಕ್ತವಾಗಿದೆ. ಆರೋಪಿಗಳನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ

ಈ ಮಧ್ಯೆ ಲಾಹೋರ್​ ಪೊಲೀಸ್ ಮುಖ್ಯಸ್ಥ ಇನ್ನೊಂದು ಎಡವಟ್ಟು ಮಾಡಿದ್ದಾರೆ. ತನ್ನ ಕಾರಿನಲ್ಲಿ ಇಂಧನ ಸಾಕಷ್ಟು ಇದೆಯೇ ಇಲ್ಲವೆ ಎಂದು ಪರಿಶೀಲನೆ ಮಾಡಿಕೊಳ್ಳದೆ, ಇಬ್ಬರು ಮಕ್ಕಳೊಂದಿಗೆ ಅಷ್ಟು ರಾತ್ರಿಯಲ್ಲಿ ಕಾರ್​ ಡ್ರೈವ್​ ಮಾಡಿಕೊಂಡು ಹೋಗುವ ಅಗತ್ಯ ಮಹಿಳೆಗೆ ಏನಿತ್ತು ಎಂದು ಪ್ರಶ್ನಿಸಿದ್ದರು. ಅದನ್ನೂ ಕೂಡ ನೆಟ್ಟಿಗರು ಖಂಡಿಸಿ, ಪೊಲೀಸ್​ ಮುಖ್ಯಸ್ಥರನ್ನು ಬಾಯಿಗೆ ಬಂದಂತೆ ಬೈದಿದ್ದರು.

ಸದ್ಯ 15 ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು ಮುಖವನ್ನೂ ಮುಚ್ಚಿಕೊಂಡಿದ್ದರು. ಆದಷ್ಟು ಶೀಘ್ರದಲ್ಲೇ ನಿಜವಾದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net