ಐಪಿಎಲ್​ ಹರಾಜಿಗೆ 1,166 ಕ್ರಿಕೆಟಿಗರ ಹೆಸರು ನೋಂದಣಿ; ಕಣದಲ್ಲಿದ್ದಾರೆ ವಿಶ್ವಕಪ್​ ತಾರೆಯರು...

ipl web
Published on

ಬೆಂಗಳೂರು: ಏಕದಿನ ವಿಶ್ವಕಪ್​ ವಿಜೇತ ಆಸ್ಟ್ರೆಲಿಯಾ ತಂಡದ ತಾರೆಯರಾದ ಟ್ರಾವಿಸ್​ ಹೆಡ್​, ನಾಯಕ ಪ್ಯಾಟ್​ ಕಮ್ಮಿನ್ಸ್​ ಮತ್ತು ಮಿಚೆಲ್​ ಸ್ಟಾರ್ಕ್​ ಸಹಿತ 1,166 ಆಟಗಾರರು ಮುಂಬರುವ ಐಪಿಎಲ್​ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಾಗಿದ್ದರೆ, 336 ವಿದೇಶೀಯರಾಗಿದ್ದಾರೆ.

ಐಪಿಎಲ್​ ಹರಾಜು ಪ್ರಕ್ರಿಯೆ ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿದ್ದು, 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್​ ಕೂಡ ಹೊಂದಿವೆ.

ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ಪರ ಮಿಂಚಿದ ಬೆಂಗಳೂರು ಮೂಲದ ಯುವ ಆಲ್ರೌಂಡರ್​ ರಚಿನ್​ ರವೀಂದ್ರ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಅವರು ಇದಕ್ಕಿಂತ 15-20 ಪಟ್ಟು ಅಧಿಕ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.ಮುಂಬೈ ತಂಡದಿಂದ ರಿಲೀಸ್​ ಆಗಿರುವ ಇಂಗ್ಲೆಂಡ್​ ವೇಗಿ ಜೋ್ರಾ ಆರ್ಚರ್​ ಈ ಬಾರಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ.

ಕನ್ನಡಿಗ ಮನೀಷ್​ ಪಾಂಡೆಗೆ 50 ಲಕ್ಷ ರೂ. ಮೂಲಬೆಲೆ

ಡೆಲ್ಲಿ ತಂಡದಿಂದ ರಿಲೀಸ್​ ಆಗಿರುವ ಕನ್ನಡಿಗ ಮನೀಷ್​ ಪಾಂಡೆ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಮತ್ತೆ ಅದೃಷ್ಟ ಪರೀಸಲಿದ್ದಾರೆ. ಆರ್​ಸಿಬಿಯಿಂದ ಹೊರಬಿದ್ದಿರುವ ವೇಗಿ ಹರ್ಷಲ್​ ಪಟೇಲ್​, ಕೆಕೆಆರ್​ ತಂಡದಿಂದ ಹೊರಬಿದ್ದಿರುವ ಶಾರ್ದೂಲ್​ ಠಾಕೂರ್​ ಸಹಿತ ಟೀಮ್​ ಇಂಡಿಯಾ ಪರ ಆಡಿರುವ 18 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಉಳಿದೆಲ್ಲರೂ ದೇಶೀಯ ಆಟಗಾರರಾಗಿದ್ದಾರೆ.

2 ಕೋಟಿ ರೂ. ಮೂಲಬೆಲೆ ಆಟಗಾರರು

ಹರ್ಷಲ್​ ಪಟೇಲ್​, ಕೇದಾರ್​ ಜಾಧವ್​, ಶಾರ್ದೂಲ್​ ಠಾಕೂರ್​, ಉಮೇಶ್​ ಯಾದವ್​ (ಭಾರತ), ಪ್ಯಾಟ್​ ಕಮ್ಮಿನ್ಸ್​, ಟ್ರಾವಿಸ್​ ಹೆಡ್​, ಸ್ಟೀವನ್​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಜೋಶ್​ ಹ್ಯಾಸಲ್​ವುಡ್​, ಸೀನ್​ ಅಬೋಟ್​, ಜೋಶ್​ ಇಂಗ್ಲಿಸ್​ (ಆಸ್ಟ್ರೆಲಿಯಾ), ಹ್ಯಾರಿ ಬ್ರೂಕ್​, ಬೆನ್​ ಡಕೆಟ್​, ಆದಿಲ್​ ರಶೀದ್​, ಡೇವಿಡ್​ ವಿಲ್ಲಿ, ಕ್ರಿಸ್​ ವೋಕ್ಸ್​, ಜೇಮಿ ಓವರ್​ಟನ್​, ಟಾಮ್​ ಬ್ಯಾಂಟನ್​ (ಇಂಗ್ಲೆಂಡ್​), ರಿಲೀ ರೋಸೌ, ವಾನ್​ ಡರ್​ ಡುಸೆನ್​, ಗೆರಾಲ್ಡ್​ ಕೋಟ್​ಜೀ (ದಣ ಆಫ್ರಿಕಾ), ಲಾಕಿ ಫಗ್ಯುರ್ಸನ್​ (ನ್ಯೂಜಿಲೆಂಡ್​), ಮುಜೀಬ್​ ಉರ್​ ರೆಹಮಾನ್​ (ಅಫ್ಘಾನಿಸ್ತಾನ), ಏಂಜೆಲೊ ಮ್ಯಾಥ್ಯೂಸ್​ (ಶ್ರೀಲಂಕಾ), ಮುಸ್ತಾಫಿಜುರ್​ ರೆಹಮಾನ್​ (ಬಾಂಗ್ಲಾದೇಶ).

1.5 ಕೋಟಿ ರೂ. ಮೂಲಬೆಲೆ ಆಟಗಾರರು

ಮೊಹಮದ್​ ನಬಿ, ಮೊಯ್ಸಸ್​ ಹೆನ್ರಿಕ್ಸ್​, ಕ್ರಿಸ್​ ಲ್ಯಾನ್​, ಕೇನ್​ ರಿಚರ್ಡ್​ಸನ್​, ಡೇನಿಯಲ್​ ಸ್ಯಾಮ್ಸ್​, ಡೇನಿಯಲ್​ ವೊರೆಲ್​, ಟಾಮ್​ ಕರನ್​, ಮರ್ಚೆಂಟ್​ ಡಿ ಲಾಂಗ್​, ಕ್ರಿಸ್​ ಜೋರ್ಡನ್​, ಡೇವಿಡ್​ ಮಲಾನ್​, ಟೈಮಲ್​ ಮಿಲ್ಸ್​, ಫಿಲ್​ ಸಾಲ್ಟ್​, ಕೋರಿ ಆಂಡರ್​ಸನ್​, ಕಾಲಿನ್​ ಮನ್ರೋ, ಜಿಮ್ಮಿ ನೀಶಾಮ್​, ಟಿಮ್​ ಸೌಥಿ, ಕಾಲಿನ್​ ಇನ್​ಗ್ರಾಂ, ವಾನಿಂದು ಹಸರಂಗ, ಜೇಸನ್​ ಹೋಲ್ಡರ್​, ಶೆರ್ಫಾನ್​​ ರುದರ್​ಪೋರ್ಡ್​​.

1 ಕೋಟಿ ರೂ. ಮೂಲಬೆಲೆ ಆಟಗಾರರರು

ಆಶ್ಟನ್​ ಅಗರ್​, ರಿಲೀ ಮೆರಿಡಿತ್​, ಡಾರ್ಸಿ ಶಾರ್ಟ್​, ಆಶ್ಟನ್​ ರ್ಟನರ್​, ಗಸ್​ ಅಟ್ಕಿನ್​ಸನ್​, ಸ್ಯಾಮ್​ ಬಿಲ್ಲಿಂಗ್ಸ್​, ಮಿಚೆಲ್​ ಬ್ರೇಸ್​ವೆಲ್​, ಮಾರ್ಟಿನ್​ ಗುಪ್ಟಿಲ್​, ಕೈಲ್​ ಜೇಮಿಸನ್​, ಆಡಂ ಮಿಲ್ನೆ, ಡೆರಿಲ್​ ಮಿಚೆಲ್​, ವೇಯ್ನ್​ ಪಾರ್ನೆಲ್​, ಡ್ವೇನ್​ ಪ್ರಿಟೋರಿಯಸ್​, ಅಲ್ಜಾರಿ ಜೋಸೆಫ್​, ರೋವ್ಮನ್​ ಪೊವೆಲ್​, ಡೇವಿಡ್​ ವೈಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net