More

    ಸ್ಟಾರ್​ ಚಿತ್ರಗಳ ಪೈಪೋಟಿ ಇಲ್ಲ; ಈ ಶುಕ್ರವಾರ 11 ಚಿತ್ರಗಳ ಬಿಡುಗಡೆ

    ಬೆಂಗಳೂರು: ಕಳೆದೊಂದು ತಿಂಗಳಿನಿಂದ ಯಾವುದೇ ದೊಡ್ಡ ಸ್ಟಾರ್​ ನಟರ ಚಿತ್ರವೂ ಬಿಡುಗಡೆಯಾಗಿಲ್ಲ. ಇನ್ನೊಂದು ತಿಂಗಳು ಬಿಡುಗಡೆಯಾಗುವ ಸಾಧ್ಯತೆಯೂ ಇಲ್ಲ. ಮಾರ್ಚ್​ 17ಕ್ಕೆ ಉಪೇಂದ್ರ ಮತ್ತು ಸುದೀಪ್​ ಅಭಿನಯದ ‘ಕಬ್ಜ’ ಚಿತ್ರವನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾವ ದೊಡ್ಡ ಚಿತ್ರವೂ ಇಲ್ಲ.

    ಇದನ್ನೂ ಓದಿ: ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯ್ತು ‘ಮಾರ್ಟಿನ್​’ ಟೀಸರ್

    ಈ ನಿರ್ವಾತವನ್ನು ಮಧ್ಯಮ ಮತ್ತು ಸಣ್ಣ ಬಜೆಟ್​ನ ಚಿತ್ರಗಳು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಪ್ರತೀ ವಾರ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಧ್ಯಮ ಮತ್ತು ಸಣ್ಣ ಬಜೆಟ್​ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಕಳೆದ ವಾರ 11 ಚಿತ್ರಗಳು ಬಿಡುಗಡೆಯಾಗಿವೆ. ನಾಳೆ ಶುಕ್ರವಾರ (ಫೆ.24) 11 ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ.

    ಹೌದು, ನಾಳೆ ಏಕಕಾಲಕ್ಕೆ 11 ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿವೆ. ಇಷ್ಟೊಂದು ಸಂಖ್ಯೆಯ ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿರುವುದು ಹೊಸದೇನಲ್ಲ. ಈ ಹಿಂದಿನ ಚಿತ್ರಗಳಲ್ಲಿ ಹಾಗೆ ಬಿಡುಗಡೆಯಾಗಿದ್ದಿದೆ. ಆದರೆ, ಈ ವರ್ಷ ಇದೇ ಮೊದಲ ಬಾರಿಗೆ ವಾರವೊಂದಕ್ಕೆ 11 ಚಿತ್ರಗಳು ಬಿಡುಗಡೆಯಾಗುತ್ತಿವೆ.

    ಇದನ್ನೂ ಓದಿ: ನಟಿ ಶುಭಾ ಪೂಂಜಾ ಮನೆಯಲ್ಲಿ ನಡೆದ ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ!

    ವಿಶೇಷವೆಂದರೆ, ಇದರಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಹಿನ್ನೆಲೆಯ, ಜಾನರ್​ನ ಚಿತ್ರಗಳಿವೆ. ‘ಗೌಳಿ’, ‘ಸೌತ್​ ಇಂಡಿಯನ್​ ಹೀರೋ’, ‘ಜೂಲಿಯೆಟ್​ 2’, ‘ಹೊಟ್ಟೆಪಾಡು’, ‘1975’, ‘ವಿಧಿ 370’, ‘ಸಂಭ್ರಮ’, ‘ಪಾಲಾರ್​’, ‘ಕ್ಯಾಂಪಸ್​ ಕ್ರಾಂತಿ’, ‘ಅಂತರಂಗ’ ಮತ್ತು ‘ಅಸ್ಥಿರ’ ಬಿಡುಗಡೆಯಾಗಲಿವೆ. ಈ ಚಿತ್ರಗಳನ್ನೂ ಸೇರಿಸಿದರೆ, ವರ್ಷದ ಮೊದಲ ಎರಡು ತಿಂಗಳಲ್ಲಿ 40 ಪ್ಲಸ್​ ಚಿತ್ರಗಳು ಬಿಡುಗಡೆಯಾದಂತಾಗುತ್ತವೆ.

    ಹಿರಿಯ ನಟಿ ಲೀಲಾವತಿ ಅವರನ್ನು ಭೇಟಿ ಮಾಡಿದ ಶ್ರೀನಾಥ್, ಪದ್ಮಾವಾಸಂತಿ, ಸುಂದರ್ ರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts