T20 Cricket ಇತಿಹಾಸದಲ್ಲಿ ಇದೇ ಮೊದಲು; ವಿಕೆಟ್​ ಕೀಪರ್​ ಸೇರಿದಂತೆ Playing 11ನಿಂದ ಬೌಲಿಂಗ್​

SMAT Delhi
Published on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಹಾಗೂ ಮಣಿಪುರ ನಡುವಿನ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಪಂದ್ಯವು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಟಿ20 ಕ್ರಿಕೆಟ್​ನಲ್ಲಿ (T20 Cricket) ಇದುವರೆಗೆ ಯಾವ ತಂಡವೂ ಮಾಡಲಾಗದ ಸಾಧನೆಯನ್ನು ದೆಹಲಿ ತಂಡ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಮಣಿಪುರ ವಿರುದ್ಧದ ಪಂದ್ಯದಲ್ಲಿ ತಂಡದ ಎಲ್ಲಾ 11 ಆಟಗಾರರು ಬೌಲಿಂಗ್​ ಮಾಡುವ ಮೂಲಕ ದೆಹಲಿ ತಂಡ ವಿಶೇಷ ದಾಖಲೆಗೆ ಪಾತ್ರವಾಗಿದ್ದು, ವಿಕೆಟ್​ ಕೀಪರ್​ ಕೂಡ ಈ ಪಂದ್ಯದಲ್ಲಿ ಬೌಲಿಂಗ್​ ಮಾಡಿ ವಿಕೆಟ್​ ಪಡೆದಿದ್ದಾರೆ. ಈ ಮೂಲಕ ದೆಹಲಿ ತಂಡವು ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ಮಣಿಪುರ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಎದುರಾಳಿಗಳ ವಿರುದ್ಧ ರಣತಂತ್ರ ಹೆಣೆದ ದೆಹಲಿ ತಂಡದ ನಾಯಕ ಆಯುಷ್​ ಬದೋನಿ ತಮ್ಮನ್ನು ಒಳಗೊಂಡಂತೆ ತಂಡದ ಎಲ್ಲಾ ಆಟಗಾರರು ಬೌಲಿಂಗ್​ ಮಾಡಿದರು. ಇದರ ಫಲವಾಗಿ ಮಣಿಪುರ ತಂಡವು 120 ರನ್​ ಗಳಿಸಲಷ್ಟೇ ಶಕ್ತವಾಯಿತು.

ದೆಹಲಿ ಪರ ಹರ್ಷ್​ ತ್ಯಾಗಿ (3-0-11-2), ದಿಗ್ವೇಶ್​ ರಾತಿ (3-1-8-2), ನಾಯಕ ಆಯುಷ್​ ಬದೋನಿ (2-1-8-1), ಆಯುಷ್​ ಸಿಂಗ್​ (2-0-7-1), ಪ್ರಿಯಾಂಶ್​ ಆರ್ಯ (1-0-2-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ. 120 ರನ್​ಗಳ ಗುರಿ ಪಡೆದ ದೆಹಲಿ ತಂಡವು 18.3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಗುರಿಯನ್ನು ತಲುಪುವ ಮೂಲಕ ಗೆಲುವಿನ ನಗೆ ಬೀರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net