More

    ‘ಡ್ಯಾಶ್​’ ಹಾಡಿಗೆ ಕೋಟಿ ವೀಕ್ಷಣೆ … ಖುಷಿಯಾದರು ಚಂದನ್​, ಸಂಜನಾ

    ಬೆಂಗಳೂರು: ಹೊಸ ವರ್ಷದ ಆಚರಣೆಗಾಗಿ ‘ಡ್ಯಾಶ್​​’ ಎಂಬ ಹಾಡನ್ನು ಆತುರಾತುರವಾಗಿ ಮಾಡಿ ಬಿಡುಗಡೆ ಮಾಡಿದ್ದರು ಗಾಯಕ, ಸಂಗೀತ ನಿರ್ದೇಶಕ ಕಂ ನಾಯಕ ಚಂದನ್​ ಶೆಟ್ಟಿ. ಆ ಹಾಡಿಗೆ ಈಗ ಜನರಿಂದ ಮೆಚ್ಚುಗೆ ಸಿಕ್ಕಿದ್ದು, ಯೂಟ್ಯೂಬ್​ನಲ್ಲಿ ಒಂದು ಕೋಟಿ ವೀಕ್ಷಣೆ ಕಂಡಿದೆಯಂತೆ.

    ಇದನ್ನೂ ಓದಿ: ‘ರೊಲೆಕ್ಸ್​’ ಕಟ್ಟಿಕೊಂಡು ಸೋನಲ್​ ಜತೆಗೆ ಚಿತ್ರೀಕರಣಕ್ಕೆ ಹೊರಟರು ಕೋಮಲ್​ …

    ‘ಡ್ಯಾಶ್​’ ಹಾಡು ಮೂಲತಃ ‘ಸೂತ್ರಧಾರಿ’ ಚಿತ್ರಕ್ಕಾಗಿ ಮಾಡಿದ್ದು, ಈ ಚಿತ್ರವನ್ನು ನವರಸನ್​ ನಿರ್ಮಿಸುತ್ತಿದ್ದು, ಕಿರಣ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಚಂದನ್​ ಶೆಟ್ಟಿ ಈ ಹಾಡಿಗೆ ಸಂಗೀತ ಸಂಯೋಜಿಸಿ, ಹಾಡಿರುವುದಷ್ಟೇ ಅಲ್ಲ, ಈ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು, ಅವರೊಂದಿಗೆ ಸಂಜನಾ ಆನಂದ್​ ಸಹ ಕಾಣಿಸಿಕೊಂಡಿದ್ದಾರೆ.

    ‘ಡ್ಯಾಶ್​’ ಹಾಡಿಗೆ 10 ಮಿಲಿಯನ್​ ವ್ಯೂಸ್​ ಸಿಕ್ಕಿರುವುದು ಚಂದನ್​ ಶೆಟ್ಟಿಗೆ ಫುಲ್​ ಖುಷಿಯಾಗಿದೆಯಂತೆ. ಈ ಸಂಭ್ರಮವನ್ನು ಕೇಕ್ ಕಟ್ ಮಾಡುವ ಮೂಲಕ ‘ಸೂತ್ರಧಾರಿ’ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿರುವ ಚಂದನ್​ ಶೆಟ್ಟಿ, ಮೂರು ವಾರಗಳಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಬಹಳ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕಮಿಷನರ್​ ಆಗಿ ಬಡ್ತಿ ಪಡೆದ ಮಾಲಾಶ್ರೀ; ‘ಕೆಂಡದ ಸೆರಗು’ ಟೀಸರ್ ರಿಲೀಸ್

    ತಮ್ಮ ಮೊದಲ ಸ್ಪೆಷಲ್​ ಹಾಡಿನ ಕುರಿತು ಮಾತನಾಡುವ ಸಂಜನಾ ಆನಂದ್, ‘ನಿರ್ಮಾಪಕರಿಗೆ ಹಾಡು ಚೆನ್ನಾಗಿ ಬರಬೇಕು ಸಾರ್​ ಎಂದು ಮೊದಲೇ ಹೇಳಿದ್ದೆ. ಏಕೆಂದರೆ, ಇದೇ ಮೊದಲಬಾರಿ ನಾನು ಬೇರೆ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೇನೆ. ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ’ ಎನ್ನುತ್ತಾರೆ ಸಂಜನಾ.

    ‘ಸಾಕ್ಷಾತ್ಕಾರ’ ಖ್ಯಾತಿಯ ಹಿರಿಯ ನಟಿ ಜಮುನಾ ನಿಧನ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts