ನೀರು ತುಂಬಿದ ಬಕೆಟ್ ಗೆ ಬಿದ್ದು 1 ವರ್ಷದ ಮಗು ಸಾವು! Haveri

untitled-design-17-68fb370e375a7
Published on

ಹಾವೇರಿ: ಮನೆಯಲ್ಲಿ ಆಟ ಆಡುವಾಗ ನೀರಿನ ಬಕೆಟ್​ ಒಳಗೆ ಬಿದ್ದು 1 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಶಿವಬಸವ ನಗರದಲ್ಲಿ ಶುಕ್ರವಾರ (ಅ.24) ನಡೆದಿದೆ.

ದಕ್ಷಿತ್ ಯಳಂಬಲ್ಲಿಮಠ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮಗು ಮನೆಯಲ್ಲಿ ಆಟ ಆಡುತ್ತಿರುವ ವೇಳೆಯಲ್ಲಿ ಆಕಸ್ಮಿಕವಾಗಿ ತಲೆ ಕೆಳಗಾಗಿ ಬಕೆಟ್​ ಒಳಗೆ ಬಿದ್ದಿದ್ದಾನೆ. ಈ ವೇಳೆ ಕೆಲ ಸಮಯದ ನಂತರ ಪಾಲಕರು ಮಗುವನ್ನು ಗಮನಿಸಿದ್ದು, ಬಕೆಟ್​ನಿಂದ ಮೇಲೆಕ್ಕೆತ್ತಿದ್ದಾರೆ. ಈ ವೇಳೆಗಾಗಲೇ ದಕ್ಷೀತ್ ಪ್ರಜ್ಞೆ ತಪ್ಪಿದ್ದು, ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆಗಾಗಲೇ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಈ ಕುರಿತು ಪಙ್ರಕರಣ ಹಾವೇರಿ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net