ಆನ್‌ಲೈನ್‌ನಲ್ಲಿ 1.30ಲಕ್ಷ ರೂ. ವಂಚನೆ

online fraud
Published on

ಕಾಸರಗೋಡು: ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ವಂಚಕನೊಬ್ಬ ಕುಂಬಳೆ ನಿವಾಸಿಯಿಂದ ಬರೋಬ್ಬರಿ 1.30 ಲಕ್ಷ ರೂ. ದೋಚಿದ್ದಾನೆ. ಕುಂಬಳೆ ಬದ್ರಿಯಾ ನಗರ ನಿವಾಸಿ ಅಬ್ದುಲ್ ಮಿಶಾಲ್ ಹಣ ಕಳೆದುಕೊಂಡವರು. ತಿರುವನಂತಪುರ ನಿವಾಸಿ ಆನಂದ್ ವಿಸ್ಮಯ ಎಂಬಾತ, ಟೈಟಾನ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಲಭಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ 2023 ಡಿ. 13 ಹಾಗೂ 14ರಂದು 1.30ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ಇದೀಗ ಹಣ ವಾಪಾಸು ಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net