೧೪ ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆ / ಪರೀಕ್ಷೆಗೆ ೫೭೧೮ ಮಂದಿ ನೋಂದಣಿ / ಪೂರ್ವಸಿದ್ದತೆಗಳನ್ನು ಪರಿಶೀಲಿಸಿದ ಡಿಸಿ ಡಾ.ಎಂ.ಆರ್.ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ೧೪ ಕೇಂದ್ರಗಳಲ್ಲಿ ನಡೆಯುವ ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಿ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪರೀಕ್ಷಾ ಮುಖ್ಯ ಮೇಲ್ವಿಚಾರಕರು ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.

ಪರೀಕ್ಷೆಗೆ ಮುನ್ನಾದಿನವಾದ ಶನಿವಾರ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಹಿತಿ ನೀಡಿ, ಪರೀಕ್ಷೆಗೆ ಒಟ್ಟು ೫೭೧೮ ಮಂದಿ ಕುಳಿತಿದ್ದು, ಎಲ್ಲಾ ೧೪ ಕೇಂದ್ರಗಳು ನಗರದಲ್ಲೇ ಇವೆ ಎಂದು ತಿಳಿಸಿದರು.

ಬೆಳಗಿನ ಅವಧಿಯ ಪರೀಕ್ಷೆ ಬೆಳಗ್ಗೆ ೧೦ ರಿಂದ ೧೨ ರವರೆಗೂ ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ ೨ ಗಂಟೆಯಿAದ ೪ ಗಂಟೆವರೆಗೂ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಶ್ನೆಪತ್ರಿಕೆಗಳನ್ನು ಖಜಾನೆಯಲ್ಲಿ ಸಂರಕ್ಷಣೆ, ವಿತರಣೆ ಕುರಿತಂತೆ ನಿಗಾವಹಿಸಲು ಅಪರ ಜಿಲ್ಲಾಧಿಕಾರಿ ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪರೀಕ್ಷಾ ನೋಡಲ್ ಅಧಿಕಾರಿಯಾಗಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಕೇಂದ್ರಕ್ಕೂ ಓರ್ವ ಮೇಲ್ಚಿಚಾರಕರಿದ್ದು, ತಲಾ ಒಬ್ಬರಂತೆ ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ ೪ ಕೇಂದ್ರಗಳಿಗೆ ಒಬ್ಬರು ವೀಕ್ಷಕರು, ತಲಾ ೩ ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಪ್ರಶ್ನೆಪತ್ರಿಕೆ ಸಾಗಣೆ ಸಂದರ್ಭದಲ್ಲಿ ಪ್ರತಿ ಮಾರ್ಗಾಧಿಕಾರಿ ಜತೆ ಐದು ಮಂದಿ ಪೊಲೀಸರ ಬೆಂಗಾವಲು ಒದಗಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಓರ್ವ ಕಂದಾಯ ನಿರೀಕ್ಷಕರನ್ನು ಜಿಲ್ಲಾಡಳಿತದಿಂದ ನೇಮಿಸಲಾಗಿದ್ದು, ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ, ಬೆಳಕು, ಡೆಸ್ಕ್ಗಳು ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿದೆ.

ಬಿಗಿ ಬಂದೋಬಸ್ತ್ ನಿಷೇಧಾಜ್ಞೆ ಜಾರಿ :

ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿದೆ, ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುವುದು ಎಂದು ತಿಳಿಸಿದ್ದಾರೆ.

೧೪ಕೇಂದ್ರಗಳಲ್ಲಿನ ಹಾಜರಾಗಿ ವಿವರ :

ಡಿಡಿಪಿಐ ಕೃಷ್ಣಮೂರ್ತಿ ಕೇಂದ್ರಗಳ ಕುರಿತು ಮಾಹಿತಿ ನೀಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು, ನೂತನ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು, ಮಹಿಳಾ ಸಮಾಜ ಪಿಯು ಕಾಲೇಜು, ಸುಭಾಷ್ ಪ್ರೌಢಶಾಲೆ, ಎಸ್‌ಡಿಸಿ ಕಾಲೇಜು, ಎಸ್‌ಡಿಸಿ ಇಂಡಿಪೆAಡೆAಟ್ ಪಿಯು ಕಾಲೇಜು, ಚಿನ್ಮಯ ವಿದ್ಯಾಲಯ, ಗೋಕುಲ ಕಾಲೇಜು, ಮಹಿಳಾ ಸಮಾಜ ಪ್ರೌಢಶಾಲೆ, ಮದರ್‌ಥೆರೆಸಾ ಇಂಗ್ಲೀಷ್ ಶಾಲೆ, ಅಲ್‌ಅಮೀನ್ ಡಾ.ಮುಮ್ತಾಜ್ ಅಹಮದ್ ಖಾನ್ ಪದವಿಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ದತೆ ನಡೆಸಲಾಗಿದೆ.

ಪರೀಕ್ಷಾ ಕಾರ್ಯಗಳಲ್ಲಿ ಮಾರ್ಗಾಧಿಕಾರಿಗಳಾಗಿ ಬಿಇಒಗಳಾದ ಉಮಾ, ಚಂದ್ರಕಲಾ, ಮುನಿಲಕ್ಷö್ಮಯ್ಯ, ಗಂಗರಾಮಯ್ಯ, ಶಿಕ್ಷಣಾಧಿಕಾರಿ ವೀಣಾ ಅವರನ್ನು ನೇಮಿಸಲಾಗಿದೆ.

ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಚೈತ್ರಾ, ತಹಸೀಲ್ದಾರ್ ನಯನಾ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ ನಗರದ ಮದರ್‌ತೆರೇಸಾ, ಸುಭಾಷ್ ಶಾಲೆ ಮತ್ತಿತರ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕ್ರಮವಹಿಸಲು ಸೂಚಿಸಿದರು.

ಕೇಂದ್ರಗಳ ಮೇಲ್ವಿಚಾರಕರಾಗಿ ಗಾಯತ್ರಿ, ಶಶಿವಧನ, ರಾಧಮ್ಮ, ನಾಗರಾಜ್ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಚಿತ್ರ ೨೮ ಕೆ.ಎಲ್.ಆರ್. ೦೪ : ಕೋಲಾರದ ೧೪ ಕೇಂದ್ರಗಳಲ್ಲಿ ನಡೆದ ೨೦೨೩-೨೪ ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಗೆ ಮುನ್ನಾದಿನ ಕೋಲಾರದ ಬಾಲಕರ ಪಿಯು ಕಾಲೇಜಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ರವಿ ಸಿದ್ದತೆಗಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net