ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರು ಆಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಶೇ.೯೦ಪೂರ್ಣ / ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರು ಆಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ೮೯೨೩ ಸರ್ವೇ ನಂ.ಗಳ ಪೈಕಿ ಭೂ ಮಂಜೂರಾತಿಯಾಗಿರುವ ೬೧೦೮ ಸರ್ವೇ ನಂ.ಗಳಲ್ಲಿನ ೨೫೮೧೦ ಮಂಜೂರಿದಾರರ ಪ್ರಕರಣಗಳನ್ನು ಗುರುತಿಸಿ ಬಿ.ಎಂ.ಸಿ ತಂತ್ರಾAಶದಲ್ಲಿ ಶೇ.೯೦ರಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ದರಖಾಸ್ತು ಪೋಡಿ ಪ್ರಕರಣಗಳ ಕುರಿತು ನ್ಯಾಯಾಂಗ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೂ ಮಂಜೂರಾತಿ ಆಗಿರುವ ೬೧೦೮ ಸರ್ವೆ ನಂಬರ್‌ಗಳ ೪೦೭೩ ಮಂಜೂರಿದಾರರ ವಿವರಗಳನ್ನು ಅನುಬಂಧ ೧ ರಿಂದ ೫ ರಂತೆ ತಂತ್ರಾAಶದಲ್ಲಿ ದಾಖಲಿಸಲಾಗಿರುತ್ತದೆ. ೪೦೭೩ ಮಂಜೂರಿದಾರರ ಪೈಕಿ ೪೬೩ ಖಾತೆದಾರರಿಗೆ ಪೋಡಿ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಸರ್ವೆ ನಂಬರ್‌ಗಳಲ್ಲಿ ಪಹಣಿ ಇಂಡೀಕರಿಸಿ ಪಹಣಿ ವಿತರಿಸಲಾಗಿರುತ್ತದೆ ಎಂದರು.

ಬಾಕಿ ಇರುವ ೩೬೧೦ ಮಂಜೂರಿದಾರರ ಬ್ಲಾಕ್‌ಗಳನ್ನು ಶೀಘ್ರವಾಗಿ ಜಮೀನಿನ ಸರ್ವೆ ಇಲಾಖೆಯಿಂದ ಅಳತೆ ಕಾರ್ಯ ನಿರ್ವಹಿಸಿ, ಪೋಡಿ ದುರಸ್ತಿಯಂತೆ ಹೊಸ ಸರ್ವೇ ನಂ.ಗಳ ಪಹಣಿಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ವಿತರಿಸಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಒಟ್ಟು ೬೧೦೮ ಸರ್ವೆ ನಂಬರ್ ಗಳಲ್ಲಿ ಭೂ ಮಂಜೂರಾತಿಯಾಗಿರುವ ೧೭೨೩೭ ಮಂಜೂರಿದಾರ ಮತ್ತು ಬ್ಲಾಕ್‌ಗಳಿಗೆ ಸಂಬAಧಿಸಿದAತೆ ಮೂಲ ಮಂಜೂರಿ ಕಡತದಲ್ಲಿನ ದಾಖಲೆಗಳು ಶಿಥಿಲ ಅಥವಾ ಗೈರು ವಿಲೇಯಾಗಿರುವುದು ಕಂಡುಬAದಿರುತ್ತದೆ.

ಸದರಿ ೧೭೨೩೭ ಪ್ರಕರಣಗಳು ಜಿಲ್ಲಾ ಮಟ್ಟದ ಗೈರು ವಿಲೇ ಪುನರ್ ನಿರ್ಮಾಣ ಸಮಿತಿ ಹಂತಕ್ಕೆ ವರ್ಗಾವಣೆಯಾಗಿದ್ದು, ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈಗಾಗಲೇ ಪ್ರತಿ ತಿಂಗಳ ೧ ನೇ ಮತ್ತು ೩ ನೇ ಶನಿವಾರದಂದು ಜಿಲ್ಲಾ ಮಟ್ಟದ ಗೈರು ವಿಲೇ ಕಡತಗಳ ಪುನರ್ ನಿರ್ಮಾಣ ಸಮಿತಿಯ ಸಭೆಗಳನ್ನು ನೆಡೆಸಲಾಗುತ್ತಿದ್ದು, ಗೈರುವಿಲೇ ಪ್ರಕರಣಗಳಿಗೆ ಸಂಬAಧಿಸಿದ ಲಭ್ಯ ದಾಖಲೆಗಳನ್ನು ಸರ್ಕಾರಿ ನಿರ್ದೇಶನಗಳನ್ವಯ ಪರಿಶೀಲಿಸಿ ಹಂತ-ಹAತವಾಗಿ ಸಮಿತಿಯಲ್ಲಿ ಅಂಗೀಕರಿಸಿ, ಪೋಡಿ ದುರಸ್ತಿಗಾಗಿ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚಿತ್ರ ೧೭ ಕೆ.ಎಲ್.ಆರ್. ೦೧ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net