

ಹೊಸಪೇಟೆ: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿಗೆ ಬಿಸಿಎ(ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್) ಕೋರ್ಸ್ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳ ಪ್ರವೇಶಾತಿ ಆರಂಭಗೊಂಡಿದೆ.
ಬಳ್ಳಾರಿಯ ವಿಎಸ್‌ಕೆ ವಿವಿ ವ್ಯಾಪ್ತಿಯಲ್ಲಿರುವ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಮತ್ತು ಬಿ.ಎಸ್ಸಿ ಕೋರ್ಸ್‌ಗಳು ಲಭ್ಯವಿದ್ದು, ಇದೀಗ ಬಿಸಿಎ ಆರಂಭಗೊಳ್ಳಲಿದೆ. ಸುಸಜ್ಜಿತ ಕಟ್ಟಡ, ಮೂಲಸೌಕರ್ಯ, ಕಂಪ್ಯೂಟರ್ ಪ್ರಯೋಗಾಲಯ, ಐ.ಸಿ.ಟಿ ಆಧಾರಿತ ತರಗತಿ ಕೋಣೆಗಳು ಮತ್ತು ನುರಿತ ಬೋಧಕ ವರ್ಗ ಹೊಂದಿದ್ದು,
ಇದನ್ನೂ ಓದಿ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಕೋರ್ಸ್
ಯು.ಜಿ.ಸಿಯಿಂದ ನ್ಯಾಕ್ ಬಿ++ ಮಾನ್ಯತೆ ಪಡೆದಿದೆ. ವಿವಿ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ. ಸರ್ಕಾರಿ ಶುಲ್ಕ ಪಾವತಿಸಿ ಬಿಸಿಎ ಪ್ರವೇಶ ಪಡೆಯಬಹುದು. ನಿಗದಿತ ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಕಾಲೇಜಿನ ಪ್ರಾಚಾರ್ಯ ಕೆ.ಶಿವಪ್ಪ ಅವರನ್ನು ಸಂಪರ್ಕಿಸಬಹುದು.