ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್‌ನಿAದ ೫ಸಾವಿರ ಮಕ್ಕಳಿಗೆ ಸಮವಸ್ತç / ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ನೆರವು / ಬಿಇಒ ಮಧುಮಾಲತಿ ಪಡುವಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಮಾಜದ ಒಳತಿಗಾಗಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಸಮುದಾಯ ಹಾಗೂ ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ೫ ಸಾವಿರ ಮಕ್ಕಳಿಗೆ ಉಚಿತ ಸಮವಸ್ತç ವಿತರಿಸುತ್ತಿರುವ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್‌ಗೆ ಶಾಲಾ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸುವುದಾಗಿ ಬಿ.ಇ.ಓ. ಮಧುಮಾಲತಿ ಪಡುವಣೆ ತಿಳಸಿದಿರು.

ನಗರದ ಸ್ಕೌಟ್ ಭವನದಲ್ಲಿ ಮಂಗಳವಾರ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್‌ನಿAದ ಕೋಲಾರ ತಾಲ್ಲೂಕಿನ ಹುತ್ತೂರು, ಹೋಳೂರು ಮತ್ತು ಕಸಬಾ ಹೋಬಳಿಗಳ ನೂರೆಪ್ಪತ್ತು ಶಾಲೆಗಳ ೫ ಸಾವಿರ ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತç ವಿತರಿಸಿ ಮಾತನಾಡಿದರು.

ದಾನಿಗಳು ನೀಡುವ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳಿ. ಇಲ್ಲವಾದರೆ ಹೆಚ್ಚುವರಿಯಾಗಿ ತಾಲ್ಲೂಕು, ಜಿಲ್ಲೆಯಿಂದ ಹೊರಗೆ ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಶಿಕ್ಷಕರಿಗೆ ಬರುತ್ತದೆ. ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಸರಿಯಾಗಿರಲಿ, ಸಮಯಕ್ಕೆ ಶಾಲೆಗೆ ಹೋಗಿ ಕೆಲಸ ನಿರ್ವಹಿಸಿ ಮಕ್ಕಳ ಪ್ರಗತಿಗೆ ಶ್ರಮಿಸಿ ಎಂದರು.

ವಿದ್ಯೆ ಸಾಧಕರ ಸ್ವತ್ತು ಎಂಬುದನ್ನು ಅರಿತು ದಾನಿಗಳು ನೀಡುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಿ, ಸಮಾಜ, ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ರಾಜಸ್ಥಾನ್ ಕಾಸ್ಮೋ ಕ್ಲಬ್ ಚೇರ್ಮನ್ ಮಹೇಶ್ ಮಾತನಾಡಿ, ನಾವು ಸರ್ಕಾರಿ ಶಾಲೆಗಳ ಇಪ್ಪತ್ತು ಲಕ್ಷ ಮಕ್ಕಳಿಗೆ ಸಮವಸ್ತç ವಿತರಿಸುವ ಯೋಜನೆ ರೂಪಿಸಿದ್ದು, ದಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ಸಮವಸ್ತçದ ಜೊತೆಗೆ ಸ್ಮಾರ್ಟ್ ಬೋರ್ಡ್, ಕ್ರೀಡಾ ಸಾಮಗ್ರಿ ಹೀಗೆ ಹತ್ತು ಹಲವು ಸಾಮಗ್ರಿಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ವಿದ್ಯಾರ್ಥಿ ಸಮುದಾಯ ವಿನಯದಿಂದಿದ್ದರೆ ಸಾಧನೆಗೆ ಅದೇ ರಹದಾರಿಯಾಗುತ್ತದೆ. ಸಮಾಜ ನನಗೇನು ನೀಡಿದೆ ಎಂದು ಪ್ರಶ್ನಿಸುವ ಸಣ್ಣತನ ತೋರದೇ ಸಮಾಜಕ್ಕೆ ನಾನೇನಾದರೂ ನೀಡಲೇಬೇಕು ಎಂಬ ಸಂಕಲ್ಪದೊAದಿಗೆ ಅಧ್ಯಯನ ಮಾಡಿ ಎಂದರು.

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಲ್ಲಿ ಓದುವಂತಾಗಲು ದಾನಿಗಳ ಮತ್ತಷ್ಟು ನೆರವು ಅಗತ್ಯವಿದೆ. ಈ ನಿಟ್ಟನಲ್ಲಿ ನಾವು ಇನ್ನು ಹೆಚ್ಚಿನ ನೆರವು ನೀಡುವ ಕುರಿತು ಚಿಂತನೆ ಮಾಡಿರುವುದಾಗಿ ತಿಳಿಸಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಶಾಲಾ ಮಕ್ಕಳಿಗೆ ನೆರವಾಗುವ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್‌ನ ದಾನಿಗಳು ನೀಡಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ ಮಾತನಾಡಿ, ನಮ್ಮ ಜಿಲ್ಲೆಯ ಅನೇಕ ಶಾಲೆಗಳಿಗೆ ದಾನಿಗಳ ಸಹಕಾರದಿಂದ ಶಾಲೆಗಳಿಗೆ ಬೇಕಾಗ ಕಲಿಕಾ ಸಾಮಗ್ರಿ, ಪೀಠೋಪಕರಣಗಳು ಮತ್ತು ಮಕ್ಕಳ ಕಲಿಕೆಗೆ ಬೇಕಾದ ಸಾಮಗ್ರಿ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಚಂದ್ರಪ್ಪ, ಗಂಗಾಧರ್, ಚಂದ್ರಶೇಖರ್, ಬಾಬುರಾವ್, ಬೈರೇಗೌಡ ಮುಂತಾದ ಶಿಕ್ಷಕರು ಹಾಜರಿದ್ದರು.

ಚಿತ್ರ ೦೯ ಕೆ.ಎಲ್.ಆರ್. ೦೪ : ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್‌ನಿAದ ಕೋಲಾರ ತಾಲ್ಲೂಕಿನ ಹುತ್ತೂರು, ಹೋಳೂರು ಮತ್ತು ಕಸಬಾ ಹೋಬಳಿಗಳ ನೂರೆಪ್ಪತ್ತು ಶಾಲೆಗಳ ೫ಸಾವಿರ ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತç ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net