ಬೂದುನೀರು ನಿರ್ವಹಣೆಗೆ ಕಲಬುರಗಿ ಯಾದಗಿರಿ ಎಲ್ಲ ಗ್ರಾಪಂಗಳು ಆಯ್ಕೆ : ಬಿ.ಜಿ.ಪಾಟೀಲ್ ಪ್ರಶ್ನೆಗೆ ಸಚಿವ ‌ಪ್ರಿಯಾಂಕ್‌ ಉತ್ತರ

Published on


ಕಲಬುರಗಿ : ಸ್ವಚ್ಛ ಭಾರತ ಯೋಜನೆ ಹಂತ-೨ರಲ್ಲಿ  ಒಳಚರಂಡಿ ನಿರ್ಮಿಸಲು  ಅವಕಾಶವಿಲ್ಲ. ಹೀಗಾಗಿ ಬೂದು ನೀರು ನಿರ್ವಹಣೆ ಮಾಡಲು ಅವಕಾಶವಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸದನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿ, ಬೂದುನೀರು ನಿರ್ವಹಣೆಗೆ ಕಲಬುರಗಿ  ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಎಲ್ಲ ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ವಿಸ್ತÈತ ಯೋಜನಾ ವರದಿಗೆ ಅನುಮೋದನೆ ನೀಡಿ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲಿವೆ ಎಂದು ವಿವರಿಸಿದ್ದಾರೆ.
ಸ್ವಚ್ಛ ಭಾರತ ಯೋಜನೆ-೨ರ ಮಾರ್ಗಸೂಚಿಯಂತೆ ಕಲಬುರಗಿ ಜಿಲ್ಲೆಯ ೨೬೧ ಹಾಗೂ ಯಾದಗಿರಿ ಜಿಲ್ಲೆಯ ೧೨೨ ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ.  ಈ ಎಲ್ಲ ಗ್ರಾಪಂಗಳಲ್ಲಿ  ಘಟಕಾಂಶಗಳನ್ನು ಅನುಷ್ಠಾನ ಮಾಡಲಾಗುತ್ತಿದೆ  ಎಂದು ಪಾಟೀಲ್‌ರ  ಇನ್ನೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.  ಈ ಎಲ್ಲ ಗ್ರಾಪಂಗಳಲ್ಲಿ ಹಸಿ ಕಸ ಮತ್ತು ಒಣಕಸ ಪ್ರತ್ಯೇಕಿಸಲಾಗುತ್ತಿದೆ. ಅದರಲ್ಲಿ ಒಣಕಸವನ್ನು ಮನೆಗಳಿಂದ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net