ತೋಡಿಗೆ ಬಿದ್ದು ಮಹಿಳೆ ಸಾವು

New Project (46)
Published on

ಕಡಬ: ಪಾಲ್ತಾಡಿ ಗ್ರಾಮದ ಚೆನ್ನಾವರ ಬರಮೇಲು ನಿವಾಸಿ ರಾಧಾ(42) ಎಂಬುವರು ಪಾಲದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.

ರಾಧಾ ಬುದ್ಧಿವಾಂದ್ಯತೆ ಹಾಗೂ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು, ಅವಿವಾಹಿತರಾಗಿದ್ದರು. ಆ.31ರಂದು ಸಂಜೆ ಮನೆಯಲ್ಲಿ ಕಾಣದೇ ಇದ್ದುದರಿಂದ ತಾಯಿ ಚೆನ್ನಮ್ಮ ಹುಡುಕಿಕೊಂಡು ಹೋದಾಗ ಮನೆಯಿಂದ 200 ಮೀ. ದೂರದಲ್ಲಿರುವ ತೋಡಿನಲ್ಲಿ ಬಿದ್ದಿದ್ದರು. ನೆರೆಮನೆಯವರ ಸಹಾಯದಿಂದ ನೀರಿನಿಂದ ಮೇಲೆತ್ತಿದ್ದರೂ ಅದಾಗಲೇ ಮೃತಪಟ್ಟಿದ್ದರು.

ಬೆಳ್ಳಾರೆ ಪೊಲೀಸ್ ಠಾಣೆ ಎಸ್‌ಐ ಡಿ.ಎನ್.ಈರಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಸಹೋದರಿ ಪುಷ್ಪಾವತಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net