ಡಿ.31ರಿಂದ ಜ.2ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ರಂಗೋತ್ಸವ

YLP DRAMA
Published on

ಸಂಚಲನ ಮೈಸೂರು ತಂಡವು ಬಳ್ಳಾರಿ ಜಿಲ್ಲೆ ಸಿರಗುಪ್ಪದ ಧಾತ್ರಿ ರಂಗ ಸಂಸ್ಥೆ ಸಹಯೋಗದಲ್ಲಿ ಡಿ.31ರಿಂದ ಜ.2ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ರಂಗೋತ್ಸವ ಆಯೋಜಿಸಿದೆ ಎಂದು ತಂಡದ ಮುಖ್ಯಸ್ಥ ದೀಪಕ್ ಮೈಸೂರು ತಿಳಿಸಿದರು.

ಉದ್ಘಾಟನಾ ಸಮಾರಂಭ ಡಿ.31ರಂದು ಸಂಜೆ 6.30ಕ್ಕೆ ನಡೆಯಲಿದೆ. ಹಿರಿಯ ರಂಗಕರ್ಮಿ ಎಚ್.ಜನಾರ್ದನ್, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ್ ಇತರರು ಭಾಗವಹಿಸಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಯಾನ ಕುರಿತ ‘ಸರಸತಿಯಾಗಲೊಲ್ಲೆ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.1ರಂದು ಸಂಜೆ 6.30ಕ್ಕೆ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ ನಡೆಯಲಿದ್ದು, ಜ.2ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ಜವರಪ್ಪ ಅಹಿಂದ, ಎಂ.ಪಿ.ಹರಿದತ್ತ, ಡಾ.ಪೂರ್ಣಿಮಾ, ನವೀನ್ ಭೂಮಿ ಇನ್ನಿತರರು ವೇದಿಕೆಯಲ್ಲಿರುವರು. ನಂತರ ಕೃಷ್ಣ ಸಂಧಾನ ಎಂಬ ನಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ರಾಜಶೇಖರ ಕದಂಬ, ಜವರಪ್ಪ ಅಹಿಂದ, ಜೇಸುದಾಸ್, ರಾಧಾ ನಾರಾಯಣಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net