

ಬೆಂಗಳೂರು: ಕ್ರೀಡಾಪಟುವಿನ ಜೀವನವೇ ಹಾಗೆ ಅನ್ಸುತ್ತೆ. ರಾತ್ರೋರಾತ್ರಿ ಹೀರೋ ಆದವರೂ ಇದ್ದಾರೆ. ಅದೇ ರೀತಿ ಇದ್ದಕ್ಕಿದಂತೆ ಮಿಂಚಿ ಮರೆಯಾದವರಿಗೇನು ಕಮ್ಮಿಯಿಲ್ಲ. ನಾವು ಹೇಳಲು ಹೊರಟಿರುವುದು ಅಲ್ಪಕಾಲದಲ್ಲೇ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಬಲಿಷ್ಠವಾಗಿ ರೂಪಿಸಲು ನೆರವಾಗಿದ್ದ ನೀಲ್ ಜಾನ್ಸನ್ ಕುರಿತು. 1999ರ ವಿಶ್ವಕಪ್ ಟೂರ್ನಿಯಲ್ಲಿ ಬೆಳಕಿಗೆ ಬಂದ ಪ್ರತಿಭೆ ನೀಲ್ ಜಾನ್ಸನ್. ಈ ಟೂರ್ನಿಯಲ್ಲಿ ಮೂರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಜಾನ್ಸನ್, ಕೆಲ ವೈಯಕ್ತಿಕ ನಿರ್ಧಾರಗಳಿಂದಾಗಿ ಕೇವಲ 2 ವರ್ಷಗಳಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯಕಂಡಿತು.
ಕ್ರಿಕೆಟ್ ಅಂದರೆ ಮೊದಲಿಗೆ ಕೇಳಿಬರುವುದು, ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಂಥ ಪ್ರಬಲ ತಂಡಗಳ ಹೆಸರು. ಇಂಥ ಬಲಿಷ್ಠ ತಂಡಗಳ ಎದುರು ಜಿಂಬಾಬ್ವೆ, ಕೀನ್ಯಾದಂಥ ತಂಡಗಳು ನಗಣ್ಯ. ಆದರೆ, ಕ್ರಿಕೆಟ್‌ನಲ್ಲಿ ಯಾವುದನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಇದಕ್ಕೆ ಸಾಲು ಸಾಲು ಸಾಕ್ಷಿಯಾಗಿದ್ದು 1999ರ ಏಕದಿನ ವಿಶ್ವಕಪ್. ವಿಶ್ವಕಪ್ ಗೆಲುವಿನ ಬಲಿಷ್ಠ ತಂಡವಾಗಿದ್ದ ದಕ್ಷಿಣ ಆಫ್ರಿಕಾ, ಭಾರತ ತಂಡಗಳಿಗೆ ಜಿಂಬಾಬ್ವೆ ಸೋಲಿನ ರುಚಿ ತೋರಿಸಿತ್ತು. ಇದಕ್ಕೆ ಪ್ರಮುಖ ಪಾತ್ರವಹಿಸಿದ್ದು ಜಾನ್ಸನ್.
ಇದನ್ನೂ ಓದಿ: ರಷ್ಯನ್ ಭಾಷೆಯ ‘ಬಾಹುಬಲಿ – 2’ ನೋಡಿದ್ದೀರಾ?
* ಗ್ಟಿೆಟೆಡ್ ಆಲ್ರೌಂಡರ್ ಜಾನ್ಸನ್
ಕ್ರಿಕೆಟ್ ವಲಯದಲ್ಲಿ ಗ್ಟಿೆಟೆಡ್ ಆಲ್ರೌಂಡರ್ ಎಂದು ಕರೆಸಿಕೊಂಡಿದ್ದ ಜಾನ್ಸನ್, ಎಡಗೈ ಬ್ಯಾಟ್ಸ್‌ಮನ್. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುತ್ತಿದ್ದ ಜಾನ್ಸನ್ ಕಟ್ಟಿಹಾಕುವುದೇ ಎದುರಾಳಿಗೆ ದೊಡ್ಡ ಸವಾಲಿಗಿರುತ್ತಿತ್ತು. ಜತೆಗೆ ವೇಗದ ಬೌಲರ್ ಕೂಡ. ಇಷ್ಟು ಸಾಕಲ್ಲವೇ ಒಬ್ಬ ಪರಿಪೂರ್ಣ ಕ್ರಿಕೆಟಿಗನಾಗಲು. ಜಾನ್ಸನ್, ಆಂಡಿ ್ಲವರ್, ಗ್ರಾಂಟ್ ್ಲವರ್ ಸಹೋದರರು, ಹೆನ್ರಿ ಒಲಂಗಾದಂಥ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದ ಜಿಂಬಾಬ್ವೆ 1999 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುವ ಭರವಸೆ ಮೂಡಿಸಿತ್ತು. ಆದರೆ, ಸ್ಥಳೀಯ ರಾಜಕೀಯ ಬಿಕ್ಕಟ್ಟಿನಿಂದಾಗಿ ಹೆಚ್ಚು ಸಂಬಳ ಸಿಗದ ಕಾರಣ ನೀಲ್ ಜಾನ್ಸನ್ ಜಿಂಬಾಬ್ವೆಯನ್ನು ತೊರೆಯಬೇಕಾಯಿತು. 2000ದಲ್ಲಿ ಜಾನ್ಸನ್ ಇಂಗ್ಲೆಂಡ್ ಪ್ರವಾಸದ ಬಳಿಕ ಜಿಂಬಾಬ್ವೆ ತೊರೆದರು. ಬಳಿಕ ಇಂಗ್ಲೆಂಡ್‌ನ ಕೆಲ ಕೌಂಟಿ ತಂಡಗಳಿಗಷ್ಟೇ ಜಾನ್ಸನ್ ಪ್ರತಿಭೆ ಮೀಸಲಾಯಿತು.
ಜಿಂಬಾಬ್ವೆ ಪರ 13 ಟೆಸ್ಟ್ ಪಂದ್ಯಗಳಾಡಿದ ಜಾನ್ಸನ್ ಒಂದು ಶತಕ ಸೇರಿದಂತೆ 532 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ 48 ಪಂದ್ಯಗಳಿಂದ 4 ಶತಕ, 11 ಅರ್ಧಶತಕ ಒಳಗೊಂಡಂತೆ 1679 ರನ್ ಕಲೆಹಾಕಿದ್ದರು. ಎರಡು ಮಾದರಿಯಂತೆ 50 ವಿಕೆಟ್ ಕಿತ್ತಿದ್ದರು.