

ಬೆಂಗಳೂರು: 18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಜೂನ್ 04ರಂದು ಪ್ರಕಟಗೊಂಡಿದ್ದು, ಈ ಬಾರಿ ಲೆಕ್ಕಾಚಾರವೆಲ್ಲವೂ ತಲೆ ಕೆಳಗಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಡಿ.ಕೆ. ಸುರೇಶ್ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಎದುರು ಎರಡು ಲಕ್ಷಕ್ಕೂ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿದ್ದು, ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ಇನ್ನೂ ಸೋಲಿನ ಹತಾಶೆಯಲ್ಲಿರುವ ಡಿ.ಕೆ. ಸುರೇಶ್ರನ್ನು ಸಂತೈಸಲು ಕಾಂಗ್ರೆಸ್ ನಾಯಕರ ದಂಡೇ ಅವರ ಮನೆಗೆ ದೌಡಾಯಿಸಿದ್ದು, ಸೋಲಿನ ಪರಮಾರ್ಶೆ ಮಾಡುತ್ತಿದ್ದಾರೆ. ಇನ್ನೂ ಡಿ.ಕೆ. ಸುರೇಶ್ರನ್ನು ಭೇಟಿ ಮಾಡಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಸೋಲಿನ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಜಮೀರ್, ಸುರೇಶ್ ಅವರ ಸೋಲು ಅಘಾತಕಾರಿಯಾಗಿದ್ದು, ಬಹಳ ನೋವುಂಟು ಮಾಡಿದೆ. ದೇಶದ ಅಲ್ಲಾ ಸಂಸತ್ ಸದಸ್ಯರ ಪೈಕಿ ಅತಿ ಹೆಚ್ಚು ಕೆಲಸ ಮಾಡಿದವರ ಯಾರಾದರು ಇದ್ದೆರ ಅದು ಡಿ.ಕೆ. ಸುರೇಶ್. ಏಕೆಂದರೆ ನಾನು ನೋಡಿದಂರೆ ಪ್ರತಿದಿನ ತಮ್ಮ ಕ್ಷೇತ್ರದ ಕೆಲಸ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಭಾನುವಾರದಂದು ಸುರೇಶ್ ಕೆಲಸ ಮಾಡಿರುವುದನ್ನು ನಾನು ನೋಡಿದ್ದೇನೆ. ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ, ಜನ ಅವರನ್ನು ಸೋಲಿಸಿದ್ದಾರೆ, ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಬಹಳ ಚೆನ್ನಾಗಿದೆ, ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ 9ನ ಸಿಕ್ಕಿವೆ. ಉಳಿದ ಕ್ಷೇತ್ರಗಳ ಸೋಲಿನ ಬಗ್ಗೆ ಪರಮಾರ್ಶಿಸಲಾಗುವುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಭೇಟಿ ಬಳಿಕ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.