VIDEO: ಯಜುವೇಂದ್ರ ಚಾಹಲ್ ರಿಷಭ್ ಪಂತ್ ಅಣಕಿಸಿದ್ದು ಯಾಕೆ...?

rishabh-chahal for web
Published on

ನವದೆಹಲಿ: ಸ್ಪಿನ್ನರ್ ಯಜುವೇಂದ್ರ ಚಾಹಲ್, ಸಾಕಷ್ಟು ತಮಾಷೆಯಲ್ಲಿ ತೊಡಗುತ್ತಾ, ಸಹ ಆಟಗಾರರನ್ನು ನಗಿಸುವುದರಲ್ಲಿ ಫೇಮಸ್. ಲಾಕ್‌ಡೌನ್‌ನಿಂದಾಗಿ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಹರಿಯಾಣದ ಆಟಗಾರ ಹಳೇ ವಿಡಿಯೋಗಳನ್ನು ಮೆಲುಕು ಹಾಕುತ್ತಾ ಸಹ-ಆಟಗಾರರಿಗೆ ಕಾಲೆಳೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಜಿಮ್‌ನಲ್ಲಿ ಅಣಕಿಸಿರುವ ಹಳೇ ವಿಡಿಯೋವೊಂದರನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಲಾಕ್ ಆಗಿರುವ ಯಜುವೇಂದ್ರ ಚಾಹಲ್, ಮನೆಯವರನ್ನು ಸೇರಿಸಿಕೊಂಡು ಮನರಂಜನಾತ್ಮಕವಾಗಿ ವಿಡಿಯೋ ಮಾಡುತ್ತಿದ್ದನ್ನು ನೋಡಿದ್ದೇವೆ. ದಿನ ಕಳೆದಂತೆ ಕ್ರಿಕೆಟ್ ಚಟುವಟಿಕೆ ತಪ್ಪಿಸಿಕೊಳ್ಳುತ್ತಿರುವ ಚಾಹಲ್, ಕಳೆದ ವರ್ಷ ಈ ದಿನ (ಥ್ರೋ ಬ್ಯಾಕ್) ಅಂಥ ಹಳೇ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಾರೆ. ಕಂಡಿಷನಿಂಗ್ ಕೋಚ್ ನಿಕ್ ವೆಬ್ ಜತೆಗೆ ರಿಷಭ್ ಪಂತ್ ಮಾಡುತ್ತಿದ್ದ ಬಾಕ್ಸಿಂಗ್ ಎಕ್ಸ್‌ಸೈಜ್‌ಗೆ ಚಾಹಲ್ ಅಣಕಿಸಿದ್ದಾರೆ. ಇದೀಗ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಪಂತ್ ಭಯಾ, ಎಷ್ಟು ತಾಖತ್ ಇದೆ ನಿನಗೆ’ ಎಂದು ಅಡಿಬರಹ ನೀಡಿದ್ದಾರೆ. ಇದಕ್ಕೆ ಪಂತ್ ಕೇವಲ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ರಿಷಬ್ ಪಂತ್ ಜತೆಗೆ ಕೆಲ ಆಟಗಾರರು ಕೂಡ ಚಾಹಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುತ್ತಿರುವ ಚಾಹಲ್, ಲಾಕ್‌ಡೌನ್ ವೇಳೆ ಹೆಚ್ಚು ಮನರಂಜಾನ್ಮಕವಾಗಿ ವಿಡಿಯೋಗಳನ್ನು ಹಂಚಿಕೊಂಡರು. ನ್ಯೂಜಿಲೆಂಡ್ ಪ್ರವಾಸವೇ ಭಾರತ ಕಡೆ ಬಾರಿಗೆ ಆಡಿದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಆಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net