ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಧೋನಿ ನನ್ನ ಮಗನ ವೃತ್ತಿಜೀವನವನ್ನು ಹಾಳುಮಾಡಿದನು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಯೋಗರಾಜ್ ಅವರು ಧೋನಿ ವಿರುದ್ಧ ಕಿಡಿಕಾರಿದ್ದು ಇದೇ ಮೊದಲೇನಲ್ಲ, ಈ ಹಿಂದೆಯೂ ಧೋನಿ ವಿರುದ್ಧ ಅನೇಕ ಬಾರಿ ಟೀಕೆ ಮಾಡಿದ್ದಾರೆ. ನನ್ನ ಮಗನ ಕೆರಿಯರ್ ಹಾಳಾಗಲು ಧೋನಿಯೇ ಕಾರಣ ಎಂದಿರುವ ಯೋಗರಾಜ್, ಕ್ಯಾನ್ಸರ್ ವಿರುದ್ಧ ಹೋರಾಡಿ ಅನೇಕ ಅವಿಸ್ಮರಣೀಯ ವಿಜಯಗಳನ್ನು ನೀಡಿದ ಯುವರಾಜ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.
ಜೀ ಸ್ವಿಚ್‌ನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಯುವರಾಜ್ ಸಿಂಗ್ ವೃತ್ತಿಜೀವನವನ್ನು ಹಾಳು ಮಾಡಿದ ಎಂಎಸ್ ಧೋನಿಯನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಧೋನಿ ಒಂದು ಬಾರಿ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳಲಿ. ಧೋನಿ ಓರ್ವ ದೊಡ್ಡ ಕ್ರಿಕೆಟಿಗ ಆದರೆ, ಆತ ನನ್ನ ಮಗನ ವಿರುದ್ಧ ಏನು ಮಾಡಿದ್ದಾನೆ? ಎಲ್ಲವೂ ಈಗ ಹೊರಬರುತ್ತಿದೆ. ಅದನ್ನು ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ನನ್ನ ಜೀವನದಲ್ಲಿ ಎರಡು ಕೆಲಸಗಳನ್ನು ಎಂದಿಗೂ ಮಾಡಿಲ್ಲ, ಮೊದಲನೆಯದಾಗಿ ತಪ್ಪು ಮಾಡಿದ ಯಾರನ್ನೂ ನಾನು ಕ್ಷಮಿಸಿಲ್ಲ ಮತ್ತು ಎರಡನೆಯದಾಗಿ ನನ್ನ ಜೀವನದಲ್ಲಿ ನಾನು ಅವರನ್ನು ಎಂದಿಗೂ ತಬ್ಬಿಕೊಂಡಿಲ್ಲ, ಅದು ನನ್ನ ಕುಟುಂಬ ಸದಸ್ಯರಾಗಲಿ ಅಥವಾ ನನ್ನ ಮಕ್ಕಳಾಗಲಿ ಎಂದು ಹೇಳಿದರು.
ಯುವರಾಜ್ ಇನ್ನೂ 4 ರಿಂದ 5 ವರ್ಷಗಳ ಕಾಲ ಸುಲಭವಾಗಿ ಆಡಬಹುದಿತ್ತು ಎಂದು ಯೋಗರಾಜ್ ಅಭಿಪ್ರಾಯಪಟ್ಟಿದ್ದಾರೆ ಮತ್ತು ಅವರ ಆರಂಭಿಕ ನಿವೃತ್ತಿಗೆ ಧೋನಿಯನ್ನು ದೂಷಿಸಿದ್ದಾರೆ.
ಆ ವ್ಯಕ್ತಿ (ಎಂಎಸ್ ಧೋನಿ) ನನ್ನ ಮಗನ ಜೀವನವನ್ನು ನಾಶಪಡಿಸಿದ್ದಾನೆ. ನನ್ನ ಮಗ ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು. ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಈ ಹಿಂದೆ ಮತ್ತೊಬ್ಬ ಯುವರಾಜ್ ಸಿಂಗ್ ಇರುವುದಿಲ್ಲ ಎಂದು ಹೇಳಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿದ್ದಕ್ಕಾಗಿ ಮತ್ತು ದೇಶಕ್ಕಾಗಿ ವಿಶ್ವಕಪ್ ಗೆದ್ದಿದ್ದಕ್ಕಾಗಿ ಭಾರತ ಸರ್ಕಾರ ಯುವರಾಜ್ ಸಿಂಗ್ಗೆ ಭಾರತ ರತ್ನವನ್ನು ನೀಡಬೇಕು ಎಂದು ಯೋಗರಾಜ್ ಹೇಳಿದರು.
Yograj Singh latest interview !
🎥 Zeeswitch#CricketTwitter #MSDhoni #IPL2025 pic.twitter.com/iUNBnwO8BG
— Riseup Pant (@riseup_pant17) September 1, 2024
2017ರ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದೇ ಯುವಿಯ ಕೊನೆಯ ಪಂದ್ಯವಾಗಿತ್ತು ಮತ್ತು ಅವರು 2019ರ ಮೇ ತಿಂಗಳಲ್ಲಿ ಯುವಿ ನಿವೃತ್ತಿ ಘೋಷಿಸಿದರು. (ಏಜೆನ್ಸೀಸ್)
ಈ ಫೋಟೋದಲ್ಲಿರೋ 6ನೇ ಬೆಕ್ಕು ಗುರುತಿಸಿದ್ರೆ ನೀವೇ ಜೀನಿಯಸ್! ಶೇ.90 ಮಂದಿಯಿಂದ ಇದು ಸಾಧ್ಯವಾಗಿಲ್ಲ!
ಯಾವ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡಲು ನೀವು ಹೆದರುತ್ತೀರಿ? ಬುಮ್ರಾ ಕೊಟ್ಟ ಉತ್ತರ ವೈರಲ್