ಅಧ್ಯಕ್ಷರಾಗಿ ರಾಮಚಂದ್ರ ಎ. ಆಯ್ಕೆ

blank

 

ಪುತ್ತೂರು: ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಶನ್ ಬೆಂಗಳೂರು ಕೇಂದ್ರಕಾರಿ ಸಮಿತಿ ಚುನಾವಣೆಯಲ್ಲಿ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ನೇತೃತ್ವದ ಯುವಶಕ್ತಿ ತಂಡದ ಎಲ್ಲ ಅಭ್ಯರ್ಥಿಗಳು ಬಹುಮತದಿಂದ ಜಯ ಗಳಿಸಿ, ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

blank

ಇಪ್ಪತ್ತು ವರ್ಷಗಳಲ್ಲಿ ಪ್ರಥಮ ಬಾರಿಗೆ ಚುನಾವಣಾ ಮೂಲಕ ಕೇಂದ್ರ ಸಮಿತಿ ಪದಾಽಕಾರಿಗಳ ಆಯ್ಕೆ ನಡೆದಿದೆ. ಕೆಪಿಟಿಸಿಎಲ್ ಮತ್ತು ರಾಜ್ಯದ ಎಲ್ಲ ಎಸ್ಕಾಂಗಳ ೩,೫೦೦ಕ್ಕೂ ಹೆಚ್ಚು ಡಿಪ್ಲೊಮಾ ಇಂಜಿನಿಯರ್ಸ್‌ಗಳ ಸದಸ್ಯತ್ವ ಹೊಂದಿರುವ ಅಸೋಸಿಯೇಶನ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸುವವರನ್ನು ಹೊರತುಪಡಿಸಿ ಬೇರೆ ಎಸ್ಕಾಂನ ಪ್ರತಿನಿಽಗೆ ರಾಜ್ಯಾಧ್ಯಕ್ಷ ಸ್ಥಾನ ದೊರಕಿರುವುದು ಇತಿಹಾಸವಾಗಿದೆ.
ರಾಮಚಂದ್ರ ಅವರು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಬೆದ್ರೋಡಿ ಮೂಲದವರಾಗಿದ್ದು, ಪ್ರಸ್ತುತ ಮೆಸ್ಕಾಂನ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯಲ್ಲೂ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Share This Article
blank

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

blank