

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಹಾಗೂ ವಿಜ್ಞಾನ ಮೇಳ ಸ್ಪರ್ಧೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿ. 1ರಂದು ನಡೆಯಲಿದೆ.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ದ.ಕ.ಜಿಲ್ಲಾ ಯುವಜನ ಒಕ್ಕೂಟ, ಸಸಿಹಿತ್ಲು ಯುವಕ-ಯುವತಿ ಮಂಡಲದ ಆಶ್ರಯದಲ್ಲಿ
ಯುವ ಜನೋತ್ಸವ ಸಂಘಟಿಸಲಾಗಿದೆ. ಡಿ. 1ರಂದು ಬೆಳಗ್ಗೆ 9ಕ್ಕೆ ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು
ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಷಯಾಧಾರಿತ ಸ್ಪರ್ಧೆ, ಜನಪದ ನೃತ್ಯ, ಜನಪದ ಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ಘೋಷಣೆ, ಕರಕುಶಲ ಕಲೆ, ಕೃಷಿ ಉತ್ಪನ್ನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಯುವಜನೋತ್ಸವದಲ್ಲಿ 15-29 ವರ್ಷದೊಳಗಿನವರು
ಭಾಗವಹಿಸಬಹುದು, ಸ್ಪರ್ಧಿಗಳು ದ.ಕ. ಜಿಲ್ಲೆಯವರಾಗಿರಬೇಕು. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟಕ್ಕೆ ಅರ್ಹರಾಗಿರುತ್ತಾರೆ ಎಂದು ಅವರು ತಿಳಿಸುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ನ.27ರಂದು ಸಾಯಂಕಾಲ 5.30ರೊಳಗೆ ಃಟಟ.್ಚಟಞ ಗೆ ಇಮೇಲ್ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.1ರಂದು ಬೆಳಗ್ಗೆ 8ಗಂಟೆಗೆ ಸಸಿಹಿತ್ಲು ಸಂಘದ ರಂಗಮಂದಿರದಲ್ಲಿ ಮತ್ತು ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸುವವರು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನೆಹರು ಯುವ ಕೇಂದ್ರದ ಅಧಿಕಾರಿ ಜಗದೀಶ್, ಕ್ರೀಡಾ ಇಲಾಖೆ ಅಧೀಕ್ಷಕ ಮಂಜುನಾಥ್, ದಿಲೀಪ್ ಕರ್ಕೇರ, ಅಮಿತ್ ಕುಮಾರ್ ಉಪಸ್ಥಿತರಿದ್ದರು.