ಖ್ಯಾತ ಯೂಟ್ಯೂಬರ್ ಮಧುಮತಿ ಸಾವಿಗೆ ವಿವಾಹೇತರ ಸಂಬಂಧ ಕಾರಣವಾಯ್ತಾ? ಪಾಲಕರು ಬಿಚ್ಚಿಟ್ಟ ರಹಸ್ಯವೇನು? Youtuber madhumathi

Youtuber madhumathi
Published on

Youtuber madhumathi : ಆಂಧ್ರ ಪ್ರದೇಶದ ಜನಪ್ರಿಯ ತೆಲುಗು ಯೂಟ್ಯೂಬರ್ ಮಧುಮತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಮಧುಮತಿ ತನ್ನ ಅಜ್ಜಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಸಾವಿಗೆ ವಿವಾಹೇತರ ಸಂಬಂಧ ಕಾರಣ ಎಂದು ಹೇಳಲಾಗುತ್ತಿದೆ.

ಎನ್‌ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆ ಮಂಡಲದ ಎ. ಕೊಂಡೂರು ಗ್ರಾಮದ ಮಧುಮತಿ (22) ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಅದಕ್ಕೆ ಸಾಕ್ಷಿಯಾಗಿ ಲಕ್ಷಾಂತರ ಫಾಲೋವರ್ಸ್​ ಸಹ ಹೊಂದಿದ್ದರು.

ಹೀಗಿರುವಾಗ ಮಧುಮತಿಗೆ ಈಗಾಗಲೇ ವಿವಾಹಿತರಾಗಿದ್ದ ಪ್ರತಾಪ್ ಎಂಬುವರರ ಪರಿಚಯವಾಯಿತು. ಇದೇ ಪರಿಚಯ ಕೆಲವು ವರ್ಷಗಳ ನಂತರ ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಇದೀಗ ಮಧುಮತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ, ಮಧುಮತಿ ತನ್ನ ಅಜ್ಜಿಯ ಮನೆಗೆ ಹೋಗಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಮಧುಮತಿ ಕುಟುಂಬದ ಸದಸ್ಯರು, ತಮ್ಮ ಮಗಳ ಆತ್ಮಹತ್ಯೆಗೆ ಪ್ರತಾಪ್ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net