ಸಾಕು ನಾಯಿ ಮಾಡಿದ ಈ ಕೆಲಸಕ್ಕೆ ಅಕ್ಕ-ಪಕ್ಕದ ನಿವಾಸಿಗಳ ನಡುವೆ ಜಗಳ, ಮುಂದಾಗಿದ್ದು ದುರಂತ!

xzcxczxczxcz
Published on

ಚಿತ್ರದುರ್ಗ: ನಾಯಿಗಳ ವಿಷಯದಲ್ಲಿ ಉಂಟಾದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ನಡೆದಿದೆ.

ಮಹಾಂತೇಶ್ (23) ಎಂಬಾತನ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿ ಸ್ವಾಮಿ ಹಾಗೂ ಕಮಲಮ್ಮರನ್ನು ಬಂಧಿಸಲಾಗಿದೆ. ಗ್ರಾಮದ ಸ್ವಾಮಿ ಹಾಗೂ ಮಹಾಂತೇಶ್ ಅಕ್ಕ ಪಕ್ಕದ ನಿವಾಸಿಗಳಾಗಿದ್ದು, ಸ್ವಾಮಿಯ ಸಾಕು ನಾಯಿಗಳು ಮಹಾಂತೇಶ್ ಮನೆ ಮುಂದೆ ಗಲೀಜು ಮಾಡುತ್ತಿವೆ ಎಂಬ ವಿಷಯದಲ್ಲಿ ಈ ಹಿಂದೆ ಇವರಿಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಮತ್ತೆ ನಡೆದ ಜಗಳದಲ್ಲಿ ಸ್ವಾಮಿ ಕಟ್ಟಿಗೆಯಿಂದ ಮಹಾಂತೇಶ್‌ನ ಮೇಲೆ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಸ್ವಾಮಿ (35) ಹಾಗೂ ಆತನ ಪತ್ನಿ ಕಮಲಮ್ಮಳನ್ನು (30) ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆಂದು ಎಸ್​​ಪಿ .ಜಿ.ರಾಧಿಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net