ಯುವಜನಾಂಗ ಸಮಾಜದ ಆಧಾರ ಸ್ತಂಭ:ಥಾವರ್​ಚಂದ್​ ಗೆಹಲೋತ್​ ಪ್ರತಿಪಾದನೆ

governor
Published on

ಬೆಂಗಳೂರು:ಯುವಕರು ರಾಷ್ಟ್ರದ ಭವಿಷ್ಯ. ಸಮಾಜದ ಆಧಾರ ಸ್ತಂಭಗಳಾಗಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಯುವಕರಿಗೆ ಆರೋಗ್ಯಕರ, ನವೀನ ಮತ್ತು ಮೌಲ್ಯಾಧಾರಿತ ವಾತಾವರಣ ಒದಗಿಸುವುದು ನಮ್ಮಲ್ಲರ ಅತ್ಯಗತ್ಯ ಎಂದು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಪ್ರತಿಪಾದಿಸಿದರು.

ಭಾರತೀಯ ನರ್ಸಸ್​ ಮತ್ತು ಅಲೈಡ್​ ಸಂದ ವತಿಯಿಂದ ಶನಿವಾರ ಕಾಲೇಜು ಕ್ಯಾಂಪಸ್​ನಲ್ಲಿ ಆಯೋಜಿಸಲಾಗಿದ್ದ "ಯುವ ಶುದ್ಧಿ ಅಭಿಯಾನ' ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವ್ಯಸನ ಸಮಾಜಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದು ನಮ್ಮ ದೇಹಕ್ಕೆ ಹಾನಿಯುಂಟುಮಾಡುವುದು ಮಾತ್ರವಲ್ಲದೆ ಮಾನಸಿಕ, ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯುವಕರ ಶಕ್ತಿ,ಉತ್ಸಾಹ,ನಾಯಕತ್ವ ಸಾಮರ್ಥ್ಯಗಳು ಸಮಾಜವನ್ನು ಮಾದಕ ವ್ಯಸನ ಮುಕ್ತ ಮತ್ತು ಸಬಲೀಕರಣಕ್ಕೆ ಬಲವಾದ ಅಡಿಪಾಯ ಒದಗಿಸಲಿದೆ. ಉತ್ತಮ ವಾತಾವರಣದಿಂದ ಯುವಕರು ಮಾದಕ ವ್ಯಸನದಿಂದ ಮುಕ್ತರಾಗುತ್ತಾರೆ. ಮಾದಕ ದ್ರವ್ಯಗಳಿಂದ ದೂರವಿರುವುದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿಯಾಗಬಹುದು ಎಂದರು.

ವಿಶ್ವ ಹಿಂದೂ ಪರಿಷತ್ತು ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸಿ, ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ ಬೆಂಗಳೂರು ಜೋನ್​ ಸಹಾಯಕ ನಿರ್ದೇಶಕ ದೇವಾನಂದ್​, ಭಾರತೀಯ ನರ್ಸೇಜ್​ ಮತ್ತು ಏಲೈಡ್​ ಸಂದ ರಾಷ್ಟ್ರೀಯ ಕಾರ್ಯದರ್ಶಿ ಜೀಜೂ ಥಾಮಸ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net