ಸೌತ್​ ಸಿನಿರಂಗದ ಯುವ ನಟಿ ದುರಂತ ಸಾವು! ಕಾಲಿವುಡ್​ಗೆ ಮತ್ತೊಂದು ಆಘಾತ

Actress Deepa
Published on

ಚೆನ್ನೈ: ಇತ್ತೀಚೆಗೆ ತೆರೆಕಂಡ "ವೈಧಾ" ಚಿತ್ರದಲ್ಲಿ ನಟಿಸಿದ್ದ ತಮಿಳು ನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಈ ಸುದ್ದಿ ಕಾಲಿವುಡ್​ ಚಿತ್ರರಂಗವನ್ನು ದಂಗು ಬಡಿಸಿದೆ.

ಚೆನ್ನೈನ ವಿರುಗಂಬಕ್ಕಮ್​​ನಲ್ಲಿರುವ ತನ್ನ ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಾಳ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರೇಮ ವಿಚಾರವಾಗಿ ಈ ದುಡುಕಿನ ನಿರ್ಧಾರವನ್ನು ದೀಪಾ ತೆಗೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ದೀಪಾಳ ನಿಜವಾದ ಹೆಸರು ಪೌಲಿನ್​ ಜೆಸ್ಸಿಕಾ. ಮಿಸ್ಕಿನ್​ ಅವರ ತುಪ್ಪರಿವಾಲನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 29 ವರ್ಷದ ನಟಿ ಒಬ್ಬರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು ಮತ್ತು ಪ್ರೀತಿಯ ಮಧ್ಯೆ ಬಂದ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಾಗದೇ ಸಾವಿನ ಹಾದಿ ಹಿಡಿದಿದ್ದಾಳೆಂದು ಹೇಳಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರ ಕಬಿಲನ್ ಮಗಳು ತೂರಿಗಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪೋಷಕರು ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಯುವ ನಟಿ ಮೃತಪಟ್ಟಿರುವುದು ಕಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net