ಅಪಘಾತ ಗಾಯಾಳು ಯುವಕ ಮೃತ್ಯು

Death Case
Published on: 

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ರಾಗಂ ಜಂಕ್ಷನ್ ಬಳಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವರ್ಕಾಡಿ ತೋಕೆ ನಿವಾಸಿ ಸಿಪ್ರಿಯನ್ ಡಿಸೋಜ ಅವರ ಪುತ್ರ ಕೆಲ್ವಿನ್ ಡಿಸೋಜ(18) ಭಾನುವಾರ ಮೃತಪಟ್ಟಿದ್ದಾರೆ. ಶುಕ್ರವಾರ ಅಪಘಾತ ಸಂಭವಿಸಿದ್ದು, ಕೆಲ್ವಿನ್ ಡಿಸೋಜ, ಪ್ರಜ್ವಲ್ ಮತ್ತು ಪ್ರೀತಮ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಕೆಲ್ವಿನ್ ಡಿಸೋಜ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತ ಸಮಯದಲ್ಲಿ ಕೆಲ್ವಿನ್ ಡಿಸೋಜ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.