ಹೊಸ ವರ್ಷದ ಮೊದಲ ದಿನವೇ ದುರಂತ ಅಂತ್ಯ ಕಂಡ ಯುವಕ…

new year new accident
Published on

ಹಾಸನ: ಜನರು ರಾಜ್ಯದ್ಯಂತ ಅದ್ದೂರಿಯಾಗಿ 2023ನ್ನು ಸ್ವಾಗತಿಸಸಿದ್ದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವ ಮೂಲಕ ಹಲವರು 2022ಕ್ಕೆ ಬೈ ಬೈ ಹೇಳಿ 2023ಕ್ಕೆ ಹಾಯ್​ ಹಾಯ್​ ಎಂದಿದ್ದಾರೆ. ಆದರೆ ಈ ಯುವಕ ಮಾತ್ರ ಹೊಸ ವರ್ಷದ ಮೊದಲ ದಿನವೇ ಪ್ರಾಣ ಕಳೆದುಕೊಂಡ ದುರಂತ ಘಟನೆ ನಡೆದಿದೆ.

ನ್ಯೂ ಇಯರ್ ಪಾರ್ಟಿ ಮುಗಿಸಿ ಹೋಗುವಾಗ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ. ಕೆಎಸ್ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ನಡೆದಾಗ ಈ ಘಟನೆ ನಡೆದದ್ದು ಕಾರು ಚಾಲಕನೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾರ್ಲೆ ಕೂಡಿಗೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಬಾಗೆ ಸಮೀಪದ ಕಾಕನಮನೆ ಗ್ರಾಮದ ಯುವಕ ಅಭಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಯುವಕ ಅಭಿ ಹೊಸವರ್ಷ ಪಾರ್ಟಿ ಮುಗಿಸಿ ವಾಪಸ್ಸು ಹಾನುಬಾಳು ಕಡೆಯಿಂದ ಊರಿಗೆ ತೆರಳುತ್ತಿದ್ದ. ಇದೇ ವೇಳೆ ಸಕಲೇಶಪುರದಿಂದ ಹಾನುಬಾಳು ಕಡೆಗೆ ಸಾರಿಗೆ ಬಸ್ ಕೂಡ ಹೊರಟಿತ್ತು. ಆಗ ರಸ್ತೆ ಮಧ್ಯೆ ಈ ಘಟನೆ ನಡೆದಿದ್ದು ಅಭಿ, ತನ್ನ ಕುಟುಂಬದವರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net