ಯುವ ಉದ್ಯಮಿ ನಿತಿನ್ ಪೂಜಾರಿ ಆತ್ಮಹತ್ಯೆ

sucide
Published on

ಮಂಗಳೂರು: ಯುವ ಉದ್ಯಮಿ, ಬಿಜೆಪಿ ಜತೆ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಮಣ್ಣಗುಡ್ಡ ನಿವಾಸಿ ನಿತಿನ್ ಪೂಜಾರಿ (41) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಣ್ಣುಗುಡ್ಡದ ಗುಂಡೂರಾವ್ ಲೇನ್‌ನಲ್ಲಿರುವ ಪ್ಲಾೃಟ್‌ನಲ್ಲಿ ವಿಷ ಸೇವಿಸಿದ್ದು, ತಡರಾತ್ರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ನಿತಿನ್ ಅವಿವಾಹಿತರಾಗಿದ್ದು, ಮೂಲತಃ ಮರೋಳಿಯವರಾಗಿದ್ದು, ಇತ್ತೀಚೆಗೆ ಮಣ್ಣಗುಡ್ಡದಲ್ಲಿ ಪ್ಲಾೃಟ್ ಖರೀದಿಸಿ ತಾಯಿಯೊಂದಿಗೆ ವಾಸವಿದ್ದರು.

ಬಿಜೆಪಿ ನಾಯಕರ ಜತೆಗೆ ಒಡನಾಟದಲ್ಲಿದ್ದ ನಿತಿನ್ ಎಂಟು ತಿಂಗಳ ಹಿಂದೆ ಕದ್ರಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಅದಕ್ಕೂ ಮುನ್ನ ಮುಡಿಪಿನಲ್ಲಿ ಪಾಲುದಾರಿಕೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಇತ್ತೀಚೆಗೆ ಆರ್ಥಿಕವಾಗಿ ಮುಗ್ಗಟ್ಟು ಉಂಟಾಗಿ ಬೇಸರದಲ್ಲಿದ್ದರು. ಆದರೂ ಯಾರೊಂದಿಗೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ದೊಡ್ಡ ಮಟ್ಟದ ಗೆಳೆಯರ ಗುಂಪು ಹೊಂದಿದ್ದರು. ಅವರ ನಿಧನಕ್ಕೆ ಶಾಸಕರು ಹಾಗೂ ಬಿಜೆಪಿ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿ, ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net