

The Kerala Story: ದಿ ಕೇರಳ ಸ್ಟೋರಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿರುವ ವಿಷಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಶೂಜಿತ್ ಸರ್ಕಾರ್, ಚಿತ್ರದ ಆಯ್ಕೆಯ ಸಂಪೂರ್ಣ ನಿರ್ಧಾರ ನೇಮಕಗೊಂಡ ತೀರ್ಪುಗಾರರ ಮೇಲಿದ್ದು, ಅದನ್ನು ಪ್ರಶ್ನಿಸಬಾರದು ಎಂದಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಶೂಜಿತ್, ಇದರ ಬಗ್ಗೆ ಹೊರಗಿನಿಂದ ಚರ್ಚಿಸುವುದರಲ್ಲಿ ಅರ್ಥವಿಲ್ಲ, ಆಯ್ಕೆಯ ನಿರ್ಧಾರ ತೀರ್ಪುಗಾರರಿಗೆ ಬಿಡಬೇಕು, ಅವರು ಯಾವ ಪ್ರಶಸ್ತಿಯನ್ನು ಯಾರಿಗೆ ನೀಡಿದ್ದಾರೆ ಎಂಬುದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದರು.
ನಿರ್ಮಾಪಕ ಶೂಜಿತ್ ಸರ್ಕಾರ್ ಪ್ರಸ್ತುತ ಸತತ ಎರಡನೇ ವರ್ಷ ಭಾರತೀಯ ಚಲನಚಿತ್ರೋತ್ಸವದ ಮೆಲ್ಬೋರ್ನ್ (IFFM) ನ ತೀರ್ಪುಗಾರರ ಸದಸ್ಯರಾಗಿದ್ದಾರೆ. ಸಿನಿಮಾವನ್ನು ನಿರ್ಣಯಿಸುವ ಪ್ರಕ್ರಿಯೆಯನ್ನು "ತುಂಬಾ ಕಷ್ಟಕರ" ಎಂದು ಕರೆದಿರುವ ಅವರು, ಛಾಯಾಗ್ರಹಣ, ಸಂಕಲನ, ನಿರ್ದೇಶನ, ನಟರು, ಎಲ್ಲದರಲ್ಲೂ ತಾಂತ್ರಿಕ ಅಂಶಗಳನ್ನು ಪರಿಗಣಿಸಬೇಕಾಗಿದೆ ಎಂದು ಚಿತ್ರದ ಆಯ್ಕೆಯ ಕುರಿತ ತಮ್ಮ ವಿಧಾನವನ್ನು ವಿವರಿಸಿದರು.(ಏಜೆನ್ಸೀಸ್)