ನವದೆಹಲಿ: ಲ್ಯಾಂಬೋರ್ಗಿನಿ ಅತ್ಯಂತ ದುಬಾರಿ ಕಾರು. ನಮ್ಮ ದೇಶದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಮಾತ್ರ ಈ ಕಾರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಈ ಐಷಾರಾಮಿ ಕಾರು ಮುಂಬೈನ ರಸ್ತೆಗಳಲ್ಲಿ ಕಂಡುಬಂದಿತು. ಅಂದಹಾಗೆ ಮುಂಬೈಯಂತಹ ಮಹಾನಗರದಲ್ಲಿ ಲ್ಯಾಂಬೋರ್ಗಿನಿಯಂತಹ ದುಬಾರಿ ಕಾರನ್ನು ನೋಡುವುದು ದೊಡ್ಡ ವಿಷಯವೇನಲ್ಲ. ಆದರೆ, ಈ ಕಾರಿನ ನಂಬರ್ ಮತ್ತು ಕಾರಿನ ಓನರ್ ಇಲ್ಲಿನ ವಿಶೇಷ.
‘MH 01 EB 0264’ ನೋಂದಣಿ ಸಂಖ್ಯೆಯುಳ್ಳ ನಂಬರ್ ಪ್ಲೇಟ್ ಹೊಂದಿರುವ ಕಾರಿನ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಕಾರಿನ ನಂಬರ್ ವಿಶೇಷತೆ ಏನು? ಯಾರು ಈ ಕಾರಿನ ಮಾಲೀಕ? ಎಂಬುದನ್ನು ನಾವೀಗ ತಿಳಿಯೋಣ.
ನೀವು ಮೇಲೆ ನೋಡುತ್ತಿರುವ ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಕಾರು ಮಾಲೀಕರು ಯಾರೆಂದು ಊಹಿಸಬಹುದು. ಕ್ರೀಡಾಭಿಮಾನಿಗಳಂತೂ ಸ್ವಲ್ಪ ಯೋಚಿಸಿದರೆ ಮಾಲೀಕ ಯಾರೆಂದು ಸುಲಭವಾಗಿ ಗೆಸ್ ಮಾಡುವ ಅವಕಾಶವಿದೆ. ಅದೇ ನಂಬರ್ ಪ್ಲೇಟ್ ಅನ್ನು ರೋಹಿತ್ ಶರ್ಮ ಅಭಿಮಾನಿಗೆ ತೋರಿಸಿದರೆ, ತಕ್ಷಣ ಇದು ನಮ್ಮ ರೋಹಿತ್ ಶರ್ಮ ಅವರ ಕಾರು ಎಂದು ಹೇಳಿಬಿಡುತ್ತಾರೆ. ಏಕೆಂದರೆ, ಕಾರಿನ ನೋಂದಣಿ ಸಂಖ್ಯೆಯ ಅಂತ್ಯದಲ್ಲಿರುವ ‘0264’ ತುಂಬಾ ವಿಶೇಷವಾಗಿದೆ. 264 ಸಂಖ್ಯೆ ಎಂದರೆ ಟೀಮ್ ಇಂಡಿಯಾದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಗೆ ತುಂಬಾ ವಿಶೇಷ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ರೋಹಿತ್ ಶರ್ಮ, 2014ರಲ್ಲಿ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 264 ರನ್‌ಗಳ ಬೃಹತ್ ಸ್ಕೋರ್ ಗಳಿಸಿದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಆ ಪಂದ್ಯದಲ್ಲಿ ರೋಹಿತ್ ಅವರು ಕೇವಲ 173 ಎಸೆತಗಳಲ್ಲಿ 33 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 264 ರನ್ ಗಳಿಸಿದರು. ರೋಹಿತ್ ಶರ್ಮಾ ಸೃಷ್ಟಿಸಿದ ವಿನಾಶದಿಂದ ಆ ಪಂದ್ಯದಲ್ಲಿ ಟೀಮ್ ಇಂಡಿಯಾ 404 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಕೊಹ್ಲಿ ಕೂಡ ಈ ಪಂದ್ಯದಲ್ಲಿ 66 ರನ್ ಗಳಿಸಿ ಮಿಂಚಿದರು. ಆ ಬಳಿಕ ಶ್ರೀಲಂಕಾವನ್ನು 251 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ 153 ರನ್‌ಗಳ ಭರ್ಜರಿ ಜಯ ಸಾಧಿಸಿತು. ಅಂದಿನಿಂದ ರೋಹಿತ್ ಶರ್ಮಗೆ 264 ಸಂಖ್ಯೆ ವಿಶೇಷವಾಗಿದೆ. ರೋಹಿತ್ ತಾನು ಖರೀದಿಸಿದ ಐಷಾರಾಮಿ ಕಾರಿಗೆ ಕೊನೆಯಲ್ಲಿ 264 ನಂಬರ್ ಬರುವಂತೆ ನಂಬರ್ ಪ್ಲೇಟ್ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)
Captain Rohit Sharma in his Lamborghini at the Mumbai streets.🔥
– THE AURA OF HITMAN ROHIT…!!!! 🌟pic.twitter.com/zlcm9lRby4
— Tanuj Singh (@ImTanujSingh) August 16, 2024
9 ಐಷಾರಾಮಿ ಕಾರುಗಳ ಮಾಲೀಕ ಈ ಪೌರ ಕಾರ್ಮಿಕ! ಈತನ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್
ಇದು ಗೌತಮ್ ಗಂಭೀರ್ ಯುಗ! ರಿಷಭ್ ಪಂತ್ ಬೌಲಿಂಗ್ ಕಂಡು ನಗೆಗಡಲಲ್ಲಿ ತೇಲಿದ ನೆಟ್ಟಿಗರು