ಅಯೋಧ್ಯೆ ರಾಮಮಂದಿರ ನಿರ್ಮಾಣ ಸ್ಥಳ ಭೇಟಿಯನ್ನು ರದ್ದುಗೊಳಿಸಿದ ಸಿಎಂ ಯೋಗಿ ಆದಿತ್ಯನಾಥ್​...

Yogi Adityanath
Published on

ಲಖನೌ: ಶ್ರೀ ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಇಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಲ್ಲಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದವಾರ ಕೂಡ ಭೇಟಿ ನೀಡಿದ್ದ ಯೋಗಿ, ಇಂದು ಮತ್ತೆ ಅಲ್ಲಿಗೆ ತೆರಳುವವರಿದ್ದರು.

ಆದರೆ ಮುಖ್ಯಮಂತ್ರಿ ಯೋಗಿ ಇಂದು ಅಯೋಧ್ಯೆ ಭೇಟಿಯನ್ನು ರದ್ದುಗೊಳಿಸಿದ್ದಾರೆ. ರಾಮಮಂದಿರ ಭೂಮಿ ಪೂಜೆಗೆ ಮೂರೇ ದಿನ ಬಾಕಿ ಇದೆ. ಹೀಗಿರುವಾಗ ಯೋಗಿ ಆದಿತ್ಯನಾಥ್ ಅವರು ಇಂದಿನ ಭೇಟಿ, ಪರಿಶೀಲನೆಯನ್ನು ಏಕಾಏಕಿ ರದ್ದುಗೊಳಿಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯ ಸಿದ್ಧತೆಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಅಲ್ಲಿ ಹಲವು ಪೊಲೀಸರು, ಅರ್ಚಕರಲ್ಲಿ ಕರೊನಾ ವೈರಸ್​ ಕಾಣಿಸಿಕೊಂಡಿದೆ. ಇಂದು ಉತ್ತರ ಪ್ರದೇಶದ ಸಚಿವೆ ಕಮಲ್​ ರಾಣಿ ಅವರು ಕರೊನಾದಿಂದ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net