ಶಾರೀರಿಕ ದೃಢತೆ, ಏಕಾಗ್ರತೆಗೆ ಸಹಕಾರಿ - ಯೋಗ ಚಿಕಿತ್ಸಕ ಡಾ.ಮಹಾಬಲ ಭಟ್ ಅನಿಸಿಕೆ

PTR_21 JUN_2
Published on

ಪುತ್ತೂರು: ಮಾನಸಿಕ ಒತ್ತಡದಿಂದ ಶೇ.೮೨ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಅದಕ್ಕೆ ಯೋಗ ಚಿಕಿತ್ಸೆ ಪರಿಣಾಮಕಾರಿ. ಶಾರೀರಿಕ ದೃಢತೆ ಜತೆಗೆ ಏಕಾಗ್ರತೆ ಸಾಽಸಲು ಯೋಗ ಸಹಕಾರಿ. ನಿತ್ಯದ ರೂಢಿಗಳಲ್ಲಿ ಯೋಗವೂ ಒಂದಾಗುವುದರಿಂದ ನೆಮ್ಮದಿಯ ಬದುಕು ಸಾಽಸಬಹುದು ಎಂದು ಯೋಗಾರೋಗ್ಯ ಯೋಗಥೆರಪಿ ಸೆಂಟರ್ ಯೋಗ ಚಿಕಿತ್ಸಕ ಡಾ.ಮಹಾಬಲ ಭಟ್ ಕಿವಿಮಾತು ಹೇಳಿದರು.


ಬೊಳುವಾರಿನ ಯೋಗಾರೋಗ್ಯ ಯೋಗ ಥೆರಪಿ ಸೆಂಟರ್‌ನಲ್ಲಿ ವಿಜಯವಾಣಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಯೋಗ ಥೆರಪಿಸ್ಟ್ ರಾಕೇಶ್ ಮಾತನಾಡಿ, ಯೋಗಾಭ್ಯಾಸ ಮನುಷ್ಯನ ಅಂತರಂಗ-ಬಹಿರಂಗ ಶುದ್ಧಿ ಮಾಡಿ ದೇಹ ಹಾಗೂ ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ಸಾಮಾನ್ಯವಾಗಿ ಕಾಡುವ ಬೆನ್ನು, ಸೊಂಟ, ತಲೆ ನೋವು, ಗಂಟು ನೋವುಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದರು.


ಡಾ.ಉದಯ ಕುಮಾರ್, ಡಾ.ಪ್ರವೀಣ್ ಕುಮಾರ್ ಮಾಹಿತಿ ನೀಡಿದರು. ಪ್ರೊ.ವಿಷ್ಣು ಭಟ್, ನಾರಾಯಣ ನಾಯಕ್, ಮೋಹನ್, ನಳಿನಾಕ್ಷ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net