ಊರಿಗೂರೇ ಖಾಲಿ, ದಾರಿ ತುಂಬ ಬೇಲಿ; ಕರೊನಾ ಹೊತ್ತಲ್ಲಿ, ಭಟ್ಟರ ಹಾಡು ಬಂತಿಲ್ಲಿ..

yog
Published on

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಾಡೊಂದನ್ನು ಬಿಡುಗಡೆ ಮಾಡುವ ಬಗ್ಗೆ ಇತ್ತೀಚೆಗಷ್ಟೇ ನಿರ್ದೇಶಕ ಯೋಗರಾಜ್​ ಭಟ್​ ಹೇಳಿಕೊಂಡಿದ್ದರು. ಇದೀಗ ಆ ಹಾಡು ಹೊರಬಂದಿದೆ. ಕರೊನಾ ಅನ್ನೋ ಮಹಾಮಾರಿಯಿಂದ ಪ್ರಸ್ತುತ ಸ್ಥಿತಿಗತಿ ಹೇಗಿದೆ ಎಂಬುದನ್ನು ಹಾಡಿನಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ ಭಟ್ರು.

ಕರೊನಾ ವಾರಿಯರ್ಸ್​ ಎಂದೇ ಹೇಳಾಗುತ್ತಿರುವ ಪೊಲೀಸ್​ ಇಲಾಖೆ, ವೈದ್ಯರು,. ಪೌರಕಾರ್ಮಿಕರು ಮತ್ತು ಮಾಧ್ಯಮವನ್ನು ಗಮನದಲ್ಲಿಟ್ಟುಕೊಂಡು ‘ಊರಿಗೂರೇ ಖಾಲಿ; ದಾರಿ ತುಂಬ ಬೇಲಿ..’ ಸಾಹಿತ್ಯವುಳ್ಳ ಹಾಡನ್ನು ಭಟ್ರು ರಚಿಸಿದ್ದಾರೆ. ಆ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಜಯ್​ ಪ್ರಕಾಶ್​ ಕಂಠದಲ್ಲಿ ಹಾಡಿನ ಅಂದ ಮತ್ತಷ್ಟು ಹೆಚ್ಚಿದೆ.

ಬೆಂಗಳೂರಿನಲ್ಲಿಯೇ ಪೂರ್ತಿ ಹಾಡಿನ ಚಿತ್ರೀಕರಣ ಮಾಡಿದ್ದು, ಉದಯ್​ ಲೀಲಾ ಕ್ಯಾಮರಾ ಕಣ್ಣಲ್ಲಿ ಖಾಲಿಯಾದ ಸಿಲಿಕಾನ್​ ಸಿಟಿ ಮೂಡಿಬಂದಿದೆ. ಅಶೋಕ್​ ವಿ ರಾಮನ್​ ಮತ್ತು ಅನಂತ್​ ಡ್ರೋಣ್​ ಕ್ಯಾಮರಾ ಮೂಲಕ ಹಾಡಿಗೆ ಮತ್ತೊಂದಿಷ್ಟು ಮೆರುಗು ನೀಡಿದ್ದಾರೆ.

ವಿಶೇಷ ಏನೆಂದರೆ, ಈ ಹಾಡಿನಲ್ಲಿ ಸಿಎಂ ಬಿ.ಎಸ್​. ಯಡಿಯೂರಪ್ಪ, ಪೊಲೀಸ್​ ಕಮಿಷನರ್​ ಭಾಸ್ಕರ್ ರಾವ್​, ಸುಧಾ ಮೂರ್ತಿ, ಶ್ರೀರಾಮುಲು ಸೇರಿ ಪೊಲೀಸ್​ ಇಲಾಖೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಮಾಧ್ಯಮದವರೂ ಕಾಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net