

ಬೆಳ್ತಂಗಡಿ: ವೇಣೂರು ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನ ವಿದ್ಯಾರ್ಥಿ ಸಂಘ, ವಿಶ್ವ ಪರಿಸರ ದಿನ ಮತ್ತು ವಿಶ್ವ ಯೋಗ ದಿನಾಚರಣೆ ನಡೆಯಿತು.
ಶಾಲಾ ಸಂಸ್ಥಾಪಕ ಗಿರೀಶ್ ಕೆ.ಎಚ್. ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಅಶ್ವಿತ್ ಕುಲಾಲ್, ಆಲೂರು ಗ್ರಾಪಂ ಸದಸ್ಯರಾದ ರವೀಂದ್ರ ಶುಭಹಾರೈಸಿದರು.
ಜೆಇಇಯಲ್ಲಿ 34ನೇ ರ್ಯಾಂಕ್ ಪಡೆದ ಪೂಜಿತ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ನಾಯಕನಾಗಿ ದಿಗಂತ್, ಉಪನಾಯಕರಾಗಿ ವಿನಯ್ ಹಾಗೂ ಶಾಲಾ ನಾಯಕರಾಗಿ 9ನೇ ತರಗತಿಯ ಮಹಮ್ಮದ್ ಅಜೀಮ್, ಸಭಾಪತಿಯಾಗಿ 10ನೇ ತರಗತಿಯ ಭುವನ್, ಉಪನಾಯಕರಾಗಿ 7ನೇ ತರಗತಿಯ ಜಯಂತ್ ಹಾಗೂ ಎಲ್ಲ ವಿಭಾಗಗಳ ನಾಯಕರು ಪ್ರಮಾಣವಚನ ಸ್ವೀಕರಿಸಿದರು.
ಪ್ರಾಂಶುಪಾಲ ಓಮನ ಎಂ.ಎ., ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ಶ್ವೇತಾ ಅಶೋಕ್, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ಮತ್ತಿತರರಿದ್ದರು. ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಶುಭಾ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ಮತ್ತು ಜೀವಶಾಸ ಉಪನ್ಯಾಸಕ ಮನೋಜ್ ನಿರೂಪಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕಿ ಶರಣ್ಯಾ ಕೆ.ಎಸ್. ವಂದಿಸಿದರು.