

ಮಂಗಳೂರು : ಯೇನೆಪೋಯ ವಿ.ವಿ.ಯ ಯೇನೆಪೋಯ ಮೆಡಿಕಲ್ ಕಾಲೇಜು ಇದರ ಬೆಳ್ಳಿ ಹಬ್ಬದ ಅಂಗವಾಗಿ ಮುಗೇರಡ್ಕ ಸರ್ಕಾರಿ
ಶಾಲಾ ಅಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ನಡೆಯಲಿದೆ.
ಜು.22ರಂದು ಬೆಳಗ್ಗೆ 9ರಿಂದ ಜು.23ರಂದು ಬೆಳಗ್ಗೆ 10ರವರೆಗೆ 25 ಗಂಟೆ ನಿರಂತರ (ಹಗಲು ರಾತ್ರಿ) ಯೋಗ ತರಬೇತಿ ದೇರಳಕಟ್ಟೆಯಲ್ಲಿರುವ ಯೇನೆಪೋಯ ವಿ.ವಿ.ಯ ಎಂಡುರೆನ್ಸ್ ಜೋನ್ನಲ್ಲಿ ನಡೆಯಲಿದೆ. ಯೋಗ ಗುರು ಕುಶಾಲಪ್ಪ ಗೌಡ ಇವರು ತಲಾ 1
ಗಂಟೆಯ 17 ಬ್ಯಾಚ್ಗಳಲ್ಲಿ ತರಬೇತಿ ನೀಡಲಿದ್ದಾರೆ. ತರಬೇತಿಯಲ್ಲಿ ಶಿಬಿರಾರ್ಥಿಗಳು ನಿತ್ಯ ಯೋಗ ಅನುಷ್ಠಾನಕ್ಕಾಗಿ 1 ಕ್ರಿಯೆ, 16 ಯೋಗಾಸನಗಳು, 2 ಪ್ರಾಣಾಯಾಮ, 1 ಧ್ಯಾನ ಹಾಗೂ 1 ವಿಶ್ರಾಂತಿ ಕ್ರಮದ ತರಬೇತಿ ನೀಡಲಾಗುವುದು. ಭಾಗವಹಿಸುವ ಶಿಬಿರಾರ್ಥಿಗಳಿಗೆ 500 ರೂ.ಮೌಲ್ಯದ ಯೋಗ ಪುಸ್ತಕ, ಯೋಗ ಬಟ್ಟೆ, ಯೋಗ ಕ್ಯಾಲೆಂಡರ್, ಯೋಗ ಪ್ರಮಾಣ ಪತ್ರ ಹಾಗೂ ಉಪಹಾರ ಉಚಿತವಾಗಿ ನೀಡಲಾಗುವುದು. ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ನ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆ ಪಡೆಯಲಾಗುವುದು.
*3 ವಿಶ್ವ ದಾಖಲೆಯ ಪ್ರಯತ್ನ
ಮ್ಯಾರಥಾನ್ ಯೋಗ ತರಬೇತಿಯ ಮೂಲಕ ಮೂರು ವಿಶ್ವ ದಾಖಲೆ ಸಾಧಿಲಸು ಪ್ರಯತ್ನಿಸಲಾಗುವುದು. ಒಂದೇ ಯೋಗ ಗುರು ಒಂದೇ ವೇದಿಕೆಯಲ್ಲಿ 25 ಗಂಟೆ ಯೋಗ ತರಬೇತಿ ನೀಡುವುದು, 25 ಗಂಟೆಯ ತರಬೇತಿಯಲ್ಲಿ 2500 ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿಗೆ ಒಳಗಾಗುವುದು. 25 ಗಂಟೆಯಲ್ಲಿ 400ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳು ತರಬೇತಿ ಪಡೆಯುವುದು ದಾಖಲೆಯಾಗಲಿದೆ.
*ಮ್ಯಾರಥಾನ್ ಯೋಗ ಪ್ರಚಾರಕ್ಕೆ ಚಾಲನೆ
ಮ್ಯಾರಥಾನ್ ಯೋಗ ಕಾರ್ಯಕ್ರಮದ ಪ್ರಚಾರಕ್ಕೆ ಯೇನೆಪೋಯ ವಿ.ವಿ.ಯ ಉಪಕುಲಪತಿ ಡಾ.ವಿಜಯ ಕುಮಾರ್ ಚಾಲನೆ ನೀಡಿದರು. ವಿ.ವಿ. ಯ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಾಯಾಜಿ , ಸಹ ಉಪಕುಲಪತಿ ಡಾ.ಶ್ರೀಪತಿ ರಾವ್, ಯೇನೆಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಮೂಸಬ್ಬ,ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ಡಾನ್, ಡಾ. ಅಭಯ್ ನಿರ್ಗುಡೆ, ಡಾ.ಅಶ್ವಿನ್ ದತ್ತ, ಡಾ.ಅಬ್ದುಲ್ ರೆಹಮಾನ್, ಡಾ. ಎ.ವಿ ಮೊದಿನ್ ಕುಟ್ಟಿ, ಡಾ. ಅಬೀಬ್ ರೆಹಮಾನ್, ಡಾ.ನಾಗರಾಜ್, ಮ್ಯಾರಥಾನ್ ಯೋಗ ಸಂಚಾಲಕ ಯೋಗ ಗುರು ಕುಶಾಲಪ್ಪ ಗೌಡ, ಸಹ ಸಂಚಾಲಕ ಡಾ. ಅಶ್ವಿನಿ ಶೆಟ್ಟಿ, ಉಪಸ್ಥಿತರಿದ್ದರು.
ಮಾಹಿತಿ ಮತ್ತು ನೋಂದಣಿಗೆ ಕುಶಾಲಪ್ಪ ಗೌಡ ,ಸಂಚಾಲಕರು , ಮ್ಯಾರಥಾನ್ ಯೋಗ , ಯೆನೆಪೋಯ ಮೆಡಿಕಲ್ ಕಾಲೇಜು ಮಂಗಳೂರು, 9845588740 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.