ಅಂಪೈರ್​ ಔಟ್​ ಕೊಟ್ಟರೂ ಕ್ರೀಸ್​ ಬಿಟ್ಟು ಹೋಗದ ಯಶಸ್ವಿ ಜೈಸ್ವಾಲ್​! ಕೊನೆಗೆ ಏನಾಯ್ತು? ವಿಡಿಯೋ ವೈರಲ್...Yashasvi Jaiswal​

Yashasvi Jaiswal​
Published on

Yashasvi Jaiswal : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಈ ತಿಂಗಳ 20 ರಿಂದ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಟೆಸ್ಟ್ ಸರಣಿಗೂ ಮುನ್ನ ಭಾರತ ಎ ತಂಡ, ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನೌಪಚಾರಿಕವಾಗಿ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಶುಕ್ರವಾರ ಆರಂಭವಾದ ನಾಲ್ಕು ದಿನಗಳ ಎರಡನೇ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಏಳು ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿತು. ಕೆ.ಎಲ್. ರಾಹುಲ್ (116 ರನ್) ಸೂಪರ್ ಶತಕದೊಂದಿಗೆ ಮಿಂಚಿದರು. ಈ ಪ್ರವಾಸದಲ್ಲಿ ಮೊದಲ ಪಂದ್ಯ ಆಡಿದ ರಾಹುಲ್ ಸ್ಥಿರ ಬ್ಯಾಟಿಂಗ್ ಮೂಲಕ ತಮ್ಮ ಶತಕವನ್ನು ಪೂರೈಸಿದರು.

ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ (52) ಮತ್ತು ಕರುಣ್ ನಾಯರ್ (40) ಪ್ರಮುಖ ಇನ್ನಿಂಗ್ಸ್ ಆಡಿದರು. ತನುಷ್ ಕೋಟಿಯನ್ (5) ಮತ್ತು ಅನ್ಶುಲ್ ಕಾಂಬೋಜ್ (1) ಕ್ರೀಸ್‌ನಲ್ಲಿದ್ದಾರೆ. ಆದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೇವಲ 17 ರನ್ ಗಳಿಸಿದರು. ಎಲ್​ಬಿಡಬ್ಲ್ಯು ಆದಾಗ ಅಂಪೈರ್ ನಿರ್ಧಾರದ ಬಗ್ಗೆ ಜೈಸ್ವಾಲ್​ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇಂಗ್ಲೆಂಡ್​​​​ ಲಯನ್ಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಎ ತಂಡ, ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿತು. ಜೈಸ್ವಾಲ್ 26 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 17 ರನ್ ಗಳಿಸಿದರು. ಈ ಪ್ರಕ್ರಿಯೆಯಲ್ಲಿ, ಇಂಗ್ಲೆಂಡ್ ಬೌಲರ್ ಕ್ರಿಸ್ ವೋಕ್ಸ್ ಎಸೆದ ಚೆಂಡು ಜೈಸ್ವಾಲ್ ಅವರ ಪ್ಯಾಡ್‌ಗೆ ಬಡಿದ ಪರಿಣಾಮ ಅಂಪೈರ್ ಅವರನ್ನು ಎಲ್ಬಿಡಬ್ಲ್ಯು ಎಂದು ಔಟ್ ಮಾಡಿದರು.

ಈ ವೇಳೆ ಅಂಪೈರ್ ನಿರ್ಧಾರದ ಬಗ್ಗೆ ಜೈಸ್ವಾಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್ ಔಟ್ ನೀಡಿದ ನಂತರವೂ ಜೈಸ್ವಾಲ್ ಕ್ರೀಸ್ ಬಿಟ್ಟು ಹೊರಹೋಗಲಿಲ್ಲ. ಅದು ಔಟ್ ಅಲ್ಲ ಎಂಬಂತೆ ಸನ್ನೆ ಮಾಡುತ್ತಲೇ ಇದ್ದರು. ಆದರೆ, ಅಂಪೈರ್ ಔಟ್ ಎಂದು ಘೋಷಿಸಿದಾಗ, ಜೈಸ್ವಾಲ್ ಕೊನೆಗೂ ಕ್ರೀಸ್ ಬಿಟ್ಟು ಪೆವಿಲಿಯನ್ ಕಡೆಗೆ ನಡೆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಂದ್ಯ ವಿಚಾರಕ್ಕೆ ಬರುವುದಾದರೆ, ಇಂಡಿಯಾ ಎ ತಂಡ ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 319 ರನ್​ ಗಳಿಸಿದೆ. ತನುಷ್ ಕೋಟಿಯನ್ (5) ಮತ್ತು ಅನ್ಶುಲ್ ಕಾಂಬೋಜ್ (1) ಕ್ರೀಸ್‌ನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net