ತೆರೆ ಮೇಲೆ ರಾಕಿಂಗ್ ದಂಪತಿ: ಫ್ರೀಡಂ ರೀಫೈನ್ಡ್ ಸನ್​ಫ್ಲವರ್ ಆಯಿಲ್​ಗೆ ಬ್ರ್ಯಾಂಡ್ ಅಂಬಾಸಡರ್

Ullasa Lead
Published on

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯೂ ಒಂದು. ‘ಮೊಗ್ಗಿನ ಮನಸ್ಸು’, ‘ಡ್ರಾಮಾ’, ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಮತ್ತು ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರಗಳಲ್ಲಿ ನಟಿಸಿದ್ದ ಯಶ್ ಮತ್ತು ರಾಧಿಕಾ, ಈಗ ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ತೆರೆಯ ಮೇಲೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ದೇಶದ ಖಾದ್ಯ ತೈಲಗಳ ಮುಂಚೂಣಿಯಲ್ಲಿರುವ ಫ್ರೀಡಂ ರೀಫೈನ್ಡ್ ಸನ್​ಫ್ಲವರ್ ಆಯಿಲ್, ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ತನ್ನ ಬ್ರ್ಯಾಂಡ್​ ಅಂಬಾಸಡರ್​ಗಳನ್ನಾಗಿ ನೇಮಕ ಮಾಡಿಕೊಂಡಿದೆ. ನಾಲ್ಕು ವರ್ಷದ ಬಳಿಕ ಒಂದಾದ ರಾಕಿಂಗ್ ಜೋಡಿ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಈ ನಿಯೋಜನೆಯ ಭಾಗವಾಗಿ ಯಶ್ ಮತ್ತು ರಾಧಿಕಾ ಜೋಡಿ ಫ್ರೀಡಂ ರೀಫೈನ್ಡ್ ಸನ್​ಫ್ಲವರ್ ಆಯಿಲ್​ನ ಕುರಿತಾಗಿ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳ ವೇದಿಕೆಗಳಲ್ಲಿ ಸಂದೇಶವನ್ನು ಸಾರುವುದರ ಜತೆಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಯಶ್, ‘ನಟನಾಗಿ ನನ್ನ ಜೀವನದಲ್ಲಿ ಫಿಟ್ನೆಸ್ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತಿದೆ. ಗುಣಮಟ್ಟ, ನೈರ್ಮಲ್ಯ ಮತ್ತು ನಾವು ಸೇವನೆ ಮಾಡುವ ಆಹಾರದ ರುಚಿ ಬಹಳ ಮುಖ್ಯವಾಗಿರುತ್ತದೆ. ಈ ಕಾರಣದಿಂದಲೇ ನಾನು ಮತ್ತು ರಾಧಿಕಾ ಇಬ್ಬರೂ ಫ್ರೀಡಂ ರೀಫೈನ್ಡ್ ಸನ್​ಫ್ಲವರ್ ಆಯಿಲ್​ ನಮ್ಮ ಆಹಾರದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದೇವೆ. ಈ ಆಯಿಲ್ ಹಗುರವಾಗಿದ್ದು, ಇದು ವಿಟಮಿನ್ ಎ, ಡಿ ಇ ಹೊಂದಿದೆ. ನಾವು ಏನನ್ನು ಸೇವನೆ ಮಾಡುತ್ತೇವೆಯೋ ಅದರಂತೆ ನಮ್ಮ ಭಾವನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಫ್ರೀಡಂ ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಬದಲಾವಣೆಯನ್ನು ಎಂಜಾಯ್ ಮಾಡುತ್ತಿದ್ದೇವೆ’ ಎನ್ನುತ್ತಾರೆ. ಈ ಸಹಭಾಗಿತ್ವದ ಬಗ್ಗೆ ಮಾತನಾಡುವ ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್​​ನ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ಅವರು, ‘ನಮ್ಮ ಬ್ರ್ಯಾಂಡ್​ಗೆ ಯಶ್ ಮತ್ತು ರಾಧಿಕಾ ದಂಪತಿಯನ್ನು ರಾಯಭಾರಿಯನ್ನಾಗಿ ಮಾಡಿಕೊಂಡಿರುವುದು ನಮಗೆ ಸಂತಸ ಮತ್ತು ಹೆಮ್ಮೆ ತಂದಿದೆ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net