

ಯಲಬುರ್ಗಾ: ತಾಲೂಕಿನ ಶಿರಗುಂಪಿ ಗ್ರಾಮದ ಸರ್ವೇ ನಂ.57ರ 14.22 ಎಕರೆ ಜಮೀನು ಪಹಣಿಯ ಯಥಾಸ್ಥಿತಿ ಕಾಪಾಡಲು ಒತ್ತಾಯಿಸಿ ದಲಿತ ಸಂಘಟನಾ ಸಮಿತಿ, ಭೀಮ ಘರ್ಜನೆ ತಾಲೂಕು ಘಟಕ ಹಾಗೂ ಶಿರಗುಂಪಿ ದಲಿತ ಭೂ ರಕ್ಷಣಾ ಸಮಿತಿಯಿಂದ ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಗುರುವಾರ ಅನಿರ್ದಿಷ್ಟಾವಧಿ ಧರಣಿ ನಡೆಯಿತು.
ಸದರಿ ಜಮೀನು ಸಾಗುವಳಿದಾರರ ಕಾಲಂನಲ್ಲಿದ್ದು, ಕಬ್ಬಾ ವಹಿವಾಟು ಹೊಂದಿ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರಲಾಗಿದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಭೂನ್ಯಾಯ ಮಂಡಳಿಯ ಮೂಲಕ ಮಂಜೂರು ಮಾಡುವಂತೆ ಕೋರಲಾಗಿತ್ತು. ಆದರೆ ಜಮೀನನ್ನು 1990-91ರ ಪ್ರಕಾರ ಸರ್ಕಾರ ಸರ್ ಪ್ಲಸ್ ಲ್ಯಾಂಡ್ ಎಂದು ಘೋಷಣೆ ಮಾಡಿದೆ. ಹೀಗಾಗಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಶಿರಗುಂಪಿ ಗ್ರಾಮಸ್ಥರಾದ ಪರಸಪ್ಪ ಹರಿಜನ, ಅಶೋಕ ಮಾದರ, ಸಿದ್ದಪ್ಪ ಮಾದರ, ರೇಣಪ್ಪ ಮಾದರ, ಫಕ್ಕೆಪ್ಪ ಮಾದರ, ಶರಣಪ್ಪ ಮಾದರ, ಶಿವಪ್ಪ ಮಾದರ, ಪ್ರಕಾಶ ಶಾವಕ್ಕ ಛಲವಾದಿ, ಯಮನೂರಪ್ಪ ಮಾದರ, ಯಲ್ಲಪ್ಪ ಛಲವಾದಿ, ಶರಣಮ್ಮ ಉಮೇಶ ಮಾದರ, ಶರಣವ್ವ ಸಿದ್ದಪ್ಪ ಮಾದರ, ಹುಲಿಗೆವ್ವ ಮಾದರ, ಸೀಲಿಂಗವ್ವ ಮಾದರ, ಶಾಂತವ್ವ ಹರಿಜನ, ಹನುಮವ್ವ ಹರಿಜನ, ಈರವ್ವ ಮಾದರ, ರಂಗವ್ವ ಮಾದರ, ಹೂವಕ್ಕ ಮಾದರ, ಮಂಜವ್ವ ಮಾದರ, ಶಾರವ್ವ, ಸೀಲಿಂಗಪ್ಪ ಹರಿಜನ, ಲಕ್ಷ್ಮವ್ವ ಹರಿಜನ, ಶಾವಕ್ಕ ಛಲವಾದಿ ಇದ್ದರು.