ಖಾಲಿ ಮನಸ್ಸಿನ ಕಲಾವಿದ ಎಂದೂ ಪರಿಪೂರ್ಣ ಆಗಲಾರ...

Yakshagana 1
Published on

ಕೊಂಡದಕುಳಿ ರಾಮಚಂದ್ರ ಹೆಗಡೆ ಅನಿಸಿಕೆ

ಯಕ್ಷಗಾನ ಮಾರ್ಗದರ್ಶಿ ಶಿಬಿರ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಾತ್ರದಲ್ಲಿ ಯಾವುದೇ ರಸ ತುಂಬುವಾಗ ಮೊದಲು ಅದು ಖಾಲಿಯಿರಬೇಕು. ಹಾಗೆಯೇ ಅಧ್ಯಯನಶೀಲ ಅಥವಾ ಸಾಧನೆ ಮಾಡಬೇಕೆಂಬ ಕಲಾವಿದ ಮೊದಲು ತನ್ನ ಅಹಂ ಬಿಟ್ಟು ತಾನು ಇನ್ನಷ್ಟು ಕಲಿಯಬೇಕಿದೆ ಎಂಬ ಭಾವ ಮೂಡಿಸಿಕೊಳ್ಳಬೇಕು. ಖಾಲಿ ಇರುವ ಮನಸ್ಸಿನ ಕಲಾವಿದ ಎಂದೂ ಪರಿಪೂರ್ಣನಾಗಲಾರ ಎಂದು ಯಕ್ಷಗಾನದ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗ (ರಿ.) ಉಡುಪಿ ವತಿಯಿಂದ ವೃತ್ತಿ ಮೇಳದ 30 ಯುವ ಕಲಾವಿದರಿಗೆ ಜುಲೈ 4ರಂದು ಆಯೋಜಿಸಿದ್ದ ನಾಲ್ಕು ದಿನಗಳ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರಾರ್ಥಿಗಳ ಸಂತಸ

Yakshagana 2
ಶಿಬಿರದಲ್ಲಿ ಪಾಲ್ಗೊಂಡಿದ್ದ ಯುವ ಕಲಾವಿದರು ತಮ್ಮ ಅನಿಸಿಕೆ ಹಂಚಿಕೊಂಡರು. ಇದೊಂದು ಅಪೂರ್ವವಾದ ಶಿಬಿರ. ನಮಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಅನೇಕ ಹಿರಿಯ ಕಲಾವಿದರು, ಯಕ್ಷಗಾನ ವಿದ್ವಾಂಸರು, ನಾಟಕ, ನೃತ್ಯ, ಗಮಕ ಹೀಗೆ ಅನ್ಯ ಕಲಾ ಪ್ರಕಾರಗಳ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ಹೊಸ ವಿಚಾರಗಳು ತಿಳಿದವು. ಡಾ. ಅನ್ನಪೂರ್ಣಾ ಆಚಾರ್ಯ ಅವರು ನಡೆಸಿಕೊಟ್ಟ ಯೋಗ ತರಗತಿ ಅತ್ಯುಪಯುಕ್ತವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.
Yakshagana 3
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್​, ಶತಾವಧಾನಿ ಡಾ. ಆರ್​. ಗಣೇಶ, ಶಿಬಿರದ ನಿರ್ದೇಶಕರಾದ ಉಬರಡ್ಕ ಉಮೇಶ ಶೆಟ್ಟಿ, ಪವನ್​ ಕಿರಣ್​ಕೆರೆ, ಕಾರ್ಯದರ್ಶಿ ಮುರಲಿ ಕಡೆಕಾರ್​, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್​, ಗಣ್ಯರಾದ ಡಾ. ಎ.ಪಿ. ಭಟ್​, ಡಾ. ಎಂ.ಆರ್​. ಹೆಗಡೆ, ಪಣಂಬೂರು ವಾಸುದೇವ ಐತಾಳ ಉಪಸ್ಥಿತರಿದ್ದರು.

ಯಕ್ಷಗಾನದ ಯುವ ಕಲಾವಿದರು ಹೆಚ್ಚಿನ ಜ್ಞಾನ ಹೊಂದಬೇಕಾಗುತ್ತದೆ. ಅದಕ್ಕಾಗಿ ಮಹಾಭಾರತ, ರಾಮಾಯಣ, ಭಾಗವತ ಮುಂತಾದ ಪೌರಾಣಿಕ ಪುಸ್ತಕಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ಕುಣಿತ ಮತ್ತು ಮಾತಿಗೂ ಸಮತೋಲನ ಇರಬೇಕು. ಚತುರ್ವಿಧ ಭಾವಗಳಲ್ಲಿ ಸಾತ್ವಿಕ ಭಾವಕ್ಕೆ ಹೆಚ್ಚು ಮಹತ್ವ ಕೊಡಬೇಕು. | ಕೊಂಡದಕುಳಿ ರಾಮಚಂದ್ರ ಹೆಗಡೆ. ಯಕ್ಷಗಾನ ಹಿರಿಯ ಕಲಾವಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net